
ನವದೆಹಲಿ: ರೊಟೊಮ್ಯಾಕ್ ಜಾಗತಿಕ ಕಂಪನಿಯ ಮಾಲೀಕ ವಿಕ್ರಮ್ ಕೊಠಾರಿಯನ್ನು ಬಂಧಿಸಲಾಗಿದೆ ಎಂಬ ವರದಿಯನ್ನು ಸಿಬಿಐ ನಿರಾಕರಿಸಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದೆ.
ಕೊಠಾರಿ ಅವರ ಕಾನ್ಪುರದ ನಿವಾಸದ ಮೇಲೆ ನಿನ್ನೆ ದಿನ ದಾಳಿ ನಡೆಸಿದ ಎರಡು ಸಿಬಿಐ ತಂಡಗಳು ರೊಟೊಮ್ಯಾಕ್ ಪೆನ್ ಮಾಲೀಕ ವಿಕ್ರಮ್ ಕೊಥಾರಿ ಹಾಗೂ ಆತನ ಪತ್ನಿ ಸಾಧನ ಕೊಥಾರಿಯನ್ನು ವಶಕ್ಕೆ ಪಡೆದಿತ್ತು.
ಅಲ್ಲದೇ, ನವದೆಹಲಿಯಲ್ಲಿನ ರೊಟೊಮ್ಯಾಕ್ ನಿರ್ದೇಶಕರ ಕಚೇರಿ ಹಾಗೂ ನಿವಾಸವನ್ನು ವಶ ಪಡಿಸಿಕೊಂಡಿದ್ದರು.
ರೊಟೊಮ್ಯಾಕ್ ಸಂಸ್ಥೆಯ ಮಾಲೀಕರು ವಿವಿಧ ಬ್ಯಾಂಕ್ ಗಳಿಂದ ಸುಮಾರು 800 ಕೋಟಿ ಕೋಟಿ ರು. ಸಾಲ ಮಾಡಿ ತೀರಸದೇ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಆದರೆ, ಅದು 3695 ಕೋಟಿ ರೂ.ಗೆ ತಲುಪಿದೆ ಎಂದು ಸಿಬಿಐ ಮೂಲಗಳಿಂದ ತಿಳಿದುಬಂದಿದೆ.
Advertisement