2 ವರ್ಷದ ನಂತರ ಹೈದರಾಬಾದ್ ವಿವಿಯ ಪರಿಹಾರ ಸ್ವೀಕರಿಸಿದ ರೋಹಿತ್ ವೇಮುಲ ತಾಯಿ

ಹೈದರಾಬಾದ್ ವಿವಿಯ ದಲಿತ ಪಿಎಚ್ ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ 2 ವರ್ಷಗಳ ನಂತರ, ವಿಶ್ವ ವಿದ್ಯಾನಿಲಯ ನೀಡಿದ 8 ಲಕ್ಷ ರೂ ...
ರೋಹಿತ್ ವೇಮುಲ ತಾಯಿ ರಾಧಿಕಾ
ರೋಹಿತ್ ವೇಮುಲ ತಾಯಿ ರಾಧಿಕಾ
ಹೈದರಾಬಾದ್: ಹೈದರಾಬಾದ್ ವಿವಿಯ ದಲಿತ ಪಿಎಚ್ ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ 2 ವರ್ಷಗಳ ನಂತರ, ವಿಶ್ವ ವಿದ್ಯಾನಿಲಯ ನೀಡಿದ 8 ಲಕ್ಷ ರೂ ಪರಿಹಾರ ಹಣವನ್ನು ವೇಮುಲ ತಾಯಿ ರಾಧಿಕಾ ಪಡೆದುಕೊಂಡಿದ್ದಾರೆ.
ಹೈದರಾಬಾದ್ ವಿಶ್ವ ವಿದ್ಯಾನಿಲಯ ನೀಡಿದ 8 ಲಕ್ಷ ರು. ಚೆಕ್ ಪಡೆದ ಬಳಿಕ ಮಾತನಾಡಿದ ರೋಹಿತ್ ವೇಮುವ ತಾಯಿ ರಾಧಿಕಾ, ನಮ್ಮ ವಕೀಲರ ಸಲಹೆಯ ಮೇರೆಗೆ ನಾನು ಪರಿಹಾರ ಹಣವನ್ನು ಪಡೆದುಕೊಳ್ಳಲು ನಿರ್ದರಿಸಿದೆ. 
ಈ ಮೊದಲು ಪರಿಹಾರ ಹಣವನ್ನು ಪಡೆಯಲು ರಾಧಿಕಾರ ನಿರಾಕರಿಸಿದ್ದರು, ವಿವಿ ಚಾನ್ಸೆಲರ್ ನನ್ನನ್ನು ಹಣ ಕೊಟ್ಟು ಕೊಂಡುಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಭಾವನೆ ಮೂಡಿತ್ತು. ಹೀಗಾಗಿ  ಹಣ ಪಡೆಯಲು ನಾನು ನಿರಾಕರಿಸಿದ್ದೆ ಎಂದರು, ಈ ಹಣವನ್ನು ತಮ್ಮ ಇಬ್ಬರು ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಲಾಗುವುದು ಎಂದು ಹೇಳಿದ್ದಾರೆ.
ಹಣವನ್ನು ಪಡೆದು ನಾನು ವಿವಿ ಜೊತೆ ರಾಜಿಯಾಗಿಲ್ಲ, ನ್ಯಾಯಕ್ಕಾಗಿ ತಮ್ಮ ಹೋರಾಟ ಇನ್ನೂ ಮುಂದುವರಿಯುತ್ತದೆ ಎಂದು ರಾಧಿಕಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com