ಶ್ರೀನಗರ; ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಕೇಂದ್ರೀಯ ಕಾರಾಗೃಹ ಉಗ್ರರ ಮುಖ್ಯಕಚೇರಿಯಾಗಿದ್ದು, ಉಗ್ರರ ನೇಮಕಾತಿ, ನಿಯೋಜನೆ ಇಲ್ಲಿಂದಲೇ ನಡೆಯುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ತನಿಖಾ ದಳದ ಅಧಿಕಾರಿಗಳು ಹೇಳಿದ್ದಾರೆ.
ಶ್ರೀನಗರ ಕೇಂದ್ರೀಯ ಜೈಲು, ಉಗ್ರರ ನೇಮಕಾತಿಯ ತಾಣವಾಗಿರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಸಿಐಡಿ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದೆ.
ಪರ್ಯಾಯ ಆಡಳಿತಾತ್ಮಕ ವ್ಯವಸ್ಥೆಯನ್ನೇ ಸ್ಥಾಪಿಸಿರುವ ಇಲ್ಲಿನ ಕೈದಿಗಳು, ಉಗ್ರರ ನೇಮಕಾತಿ ಚಟುವಟಿಕೆಗಳಲ್ಲಿ ನಿರರಾದ ಬಗ್ಗೆ ಹಲವು ಮುನ್ನೆಚ್ಚರಿಕೆಯ ಹೊರತಾಗಿಯೂ ಇಲ್ಲಿನ ಪೊಲೀಸರು ಈ ಅಂಶವನ್ನು ನಿರ್ಲಕ್ಷಿಸಿದ್ದಾರೆಂದು ಹೇಳಲಾಗುತ್ತಿದೆ.
ಒಳಗಿನಿಂದ ಒಪ್ಪಿಗೆ ಸಿಕ್ಕ ಬಳಿಕ ಮಾತ್ರ ಹೊಸ ಉಗ್ರನ ನೇಮಕ ಮಾಡಿಕೊಳ್ಳುವಷ್ಟರ ಮಟ್ಟಿಗೆ ಕೇಂದ್ರೀಯ ಜೈಲಿನ ಪಾತ್ರ ಮುಖ್ಯವಾಗಿದೆ. ಆದಾಗಿಯೂ,ಿ ಇಂತಹ ಒಪ್ಪಿಗೆ ಯಾರು ನೀಡುತ್ತಾರೆಂಬ ಪರಿಶೀಲನೆ ನಡೆಯುತ್ತಿದೆ. ಆಡಳಿತ ವ್ಯವಸ್ಥೆಯಂತೆ, ಜೈಲಿನೊಳಗೆ ಕೈದಿಗಳದ್ದೂ ಪರ್ಯಾಯ ಆಡಳಿತ ವ್ಯವಸ್ಥೆಯಿದೆ.
6 ಜನರ ಘೋಷಿತ ಆಡಳಿತ ಮಂಡಳಿಗೆ ಒಬ್ಬ ಮುಖ್ಯಸ್ಥನೂ ಕೂಡ ಇರುತ್ತಾನೆ. ಈ ಮಂಡಳಿ 6 ತಿಂಗಳಿಗೊಮ್ಮೆ ಬದಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೈದಿಗಳು ಇಲ್ಲಿನ ಜೈಲು ಸಿಬ್ಬಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆಗಳನ್ನು ಹಾಕುವುದರಿಂದ ಇದು ಮೇಲಾಧಿಕಾರಿಗಳ ಗಮನಕ್ಕೂ ಬರುತ್ತಿಲ್ಲ ಎನ್ನಲಾಗಿದೆ.