ಯಶಸ್ಸು, ವಿಫಲತೆ ಬದುಕಿನ ಅಂಗ, ವಿಫಲತೆ ಬಗ್ಗೆ ಭಯವಿಲ್ಲಾ : ದೀಪಿಕಾ ಪಡುಕೋಣೆ

ಯಶಸ್ಸು , ವಿಫಲತೆ ಬದುಕಿನ ಅಂಗವಾಗಿದ್ದು, ವಿಫಲತೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.
ಹೈದ್ರಾಬಾದಿನಲ್ಲಿ ನಡೆದ WICT  ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಚಿತ್ರ
ಹೈದ್ರಾಬಾದಿನಲ್ಲಿ ನಡೆದ WICT ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಚಿತ್ರ

ಹೈದ್ರಾಬಾದ್ : ಯಶಸ್ಸು , ವಿಫಲತೆ ಬದುಕಿನ ಅಂಗವಾಗಿದ್ದು, ವಿಫಲತೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.

ಹೈದ್ರಾಬಾದಿನಲ್ಲಿ ನಡೆದ WICT  ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು  ಮಾನಸಿಕ ಮನೋಸ್ಥೈರ್ಯ ಕಾಪಾಡುವ ಕುರಿತಂತೆ ನ್ಯಾಶ್ ಕಮ್ ಉಪಾಧ್ಯಕ್ಷ ವಿಪ್ರೋ ರಿಷೀದ್ ಪ್ರೇಮ್ ಜೀ ಅವರೊಂದಿಗೆ ತನ್ನ ಅಭಿಪ್ರಾಯ ಹಂಚಿಕೊಂಡ ದೀಪಿಕಾ ಪಡುಕೋಣೆ, ಮಾನಸಿಕ ಒತ್ತಡದಿಂದ ಬಳಲುತ್ತಿರುವವರಿಗೆ ಆಪ್ತ ಸಮಾಲೋಚಕರ ಮೂಲಕ ಚಿಕಿತ್ಸೆ ಒದಗಿಸುವುದು ಅತಿ ಪ್ರಮುಖವಾಗಿದೆ ಎಂದರು.

ಮಾನಸಿಕ ಒತ್ತಡದಿಂದ ಬಳಲುತ್ತಿರುವ ನೌಕರರಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಐಟಿ ಕಂಪನಿಗಳಲ್ಲೂ ಆಪ್ತ ಸಮಾಲೋಚಕರು ಹಾಗೂ ಮನೋವೈದ್ಯರನ್ನು ನೇಮಿಸುವಂತೆ ಐಟಿ ಕಂಪನಿಗಳಿಗೆ ಅವರು ಮನವಿ ಮಾಡಿಕೊಂಡರು.

 ತಂತ್ರಜ್ಞಾನದ ನೆರವಿನ ಮೂಲಕ ಮಾನಸಿಕ ಒತ್ತಡದಿಂದ ಹೊರಗೆ ಬರುವಂತೆ ಅರಿವು ಮೂಡಿಸಬಹುದು ಆದರೆ, ಅದಕ್ಕಿಂತಲೂ ಹೆಚ್ಚಾಗಿ ಪರಸ್ಪರ ಭಾವನೆ ಹಂಚಿಕೊಳ್ಳುವ ಮೂಲಕ ಇದನ್ನು ದೂರ ಮಾಡಬಹುದು ಎಂದು ದೀಪಿಕಾ ಪಡುಕೋಣೆ ಅಭಿಪ್ರಾಯಪಟ್ಟರು.ಸಾಮಾಜಿಕ ಜಾಲತಾಣಗಳ ಮೂಲಕ ಆಗುತ್ತಿರುವ ತೊಂದರೆಗಳ ಕುರಿತಂತೆ ಮಾತನಾಡಿದರು.

 ಒತ್ತಡಕ್ಕೊಳಗಾದಾಗ ಹಾಸಿಗೆಯಿಂದ ಮೇಲೆ ಏಳುವುದಿಲ್ಲ, ಕೆಲಸಕ್ಕೆ ಹೋಗುವುದಿಲ್ಲ ಎನ್ನುವ ದೀಪಿಕಾ ಪಡುಕೋಣೆ, ಸರಿಯಾಗಿ ಯೋಜನೆ ಮಾಡಲು ಸಾಧ್ಯವಾಗದಿದ್ದಾಗ ತಮ್ಮಷ್ಟಕ್ಕೇ ತಾವೇ ಯೋಚನೆ ಮಾಡಿಕೊಳ್ಳದಂತೆ ಸಲಹೆ ನೀಡಿದರು.

 ಆಕೆ ನಟಿಸಿದ ಕೆಲ ಎಪಿಸೋಡ್ ಗಳು ಸ್ಥಗಿತಗೊಂಡಾಗ ಹಾಗೂ ಆಕೆಯನ್ನು ನೋಡಿ ಅವರ ಪೋಷಕರು ಬೆಂಗಳೂರಿಗೆ ಹಿಂದಿರುಗಿದಾಗ ದೀಪಿಕಾ ಪಡುಕೋಣೆ ಆಗುತ್ತಿದ್ದ ಸಮಸ್ಯೆಯನ್ನು ಅವರ  ತಾಯಿಯೇ ಅರ್ಥಮಾಡಿಸಿ ಆಪ್ತ ಸಲಹೆ ನೀಡುತ್ತಿದ್ದಾರಂತೆ .

 ಮಾನಸಿಕ ಒತ್ತಡದಿಂದ ಬಳಲುವುದು ಮನೋರೋಗವಲ್ಲಾ, ಮನೋಶಾಸ್ತ್ರರ ಬಳಿ ಹೋಗಿ ಸೂಕ್ತ ತಿಳಿವಳಿಕೆ ಪಡೆಯುವಂತೆ ಅವರು ಸಲಹೆ ನೀಡಿದರು.

ಈ ನಿಟ್ಟಿನಲ್ಲಿ ತಾನೂ ಸ್ಥಾಪಿಸಿರುವ ಫೌಂಡೇಷನ್ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕದ ದಾವಣಗೆರೆ ಜಿಲ್ಲೆಯ ಜನರಲ್ಲಿ ಅರಿವು ಮೂಡಿಸುತ್ತಿರುವುದಾಗಿ ಹೇಳಿದ ದೀಪಿಕಾ ಪಡುಕೋಣೆ, ಒಬ್ಬರ ಜೀವ ಕಾಪಾಡುವಷ್ಟು ನಾವು ಶಕ್ತರಾಗಿದ್ದರೆ ನನ್ನ ಕೆಲಸ ಉತ್ತಮವಾಗಿದೆ ಎಂಬಂತಹ ಮನೋಭಾವ ಮೂಡುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com