2007ರ ಗೋರಖ್ ಪುರ ದಂಗೆ: ಯೋಗಿ ಆದಿತ್ಯನಾಥ್ ವಿರುದ್ಧ ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಗೋರಖ್ ಪುರದಲ್ಲಿ 2007ರ ದಂಗೆ ಪ್ರಕರಣದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ....
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
Updated on: 

ನವದೆಹಲಿ: ಗೋರಖ್ ಪುರದಲ್ಲಿ 2007ರ ದಂಗೆ ಪ್ರಕರಣದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾತ್ರವಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಮರು ತನಿಖೆ ನಡೆಸಬೇಕೆಂದು ಸಲ್ಲಿಸಿದ್ದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.

ಗೋರಖ್ ಪುರ ಕೋಮುಗಲಭೆಗೆ  ಸಂಬಂಧಪಟ್ಟಂತೆ ಸ್ವತಂತ್ರ ಸಿಬಿಐ ತನಿಖೆ ನಡೆಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.

2008ರಲ್ಲಿ ಪರ್ವೇಜ್ ಪರ್ವಾಜ್ ಎಂಬುವವರು ಅಲಹಾಬಾದ್  ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು. 2007ರ ಕೋಮುಗಲಭೆ ನಂತರ ಗೋರಖ್ ಪುರದ ಕಂಟೋನ್ಮೆಂಟ್  ಪೊಲೀಸ್ ಠಾಣೆಯಲ್ಲ ದಾಖಲಿಸಲಾಗಿದ್ದ ಎಫ್ಐಆರ್ ನಲ್ಲಿ  ಕೂಡ ಪರ್ವೇಜ್ ದೂರುದಾರರಾಗಿದ್ದಾರೆ.

2007ರಲ್ಲಿ, ಯೋಗಿ ಆದಿತ್ಯನಾಥ್ ಸಂಸದರಾಗಿದ್ದರು. ಎರಡು ಕೋಮುಗಳ ನಡುವೆ ಗಲಭೆ ಉಂಟುಮಾಡಿ ಶಾಂತಿ, ಸುವ್ಯವಸ್ಥೆಯನ್ನು ಕದಡಿದ್ದಾರೆ ಎಂದು ಅವರ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಯೋಗಿ ಅವರ ಬೆಂಬಲಿಗರಾದ ಹಿಂದು ಯುವ ವಾಹಿನಿ ಸದಸ್ಯರೊಂದಿಗೆ ಬಂಧಿಸಲ್ಪಟ್ಟಿದ್ದರು. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಪಡಿಸಿದ್ದಲ್ಲದೆ ಕೃಷಿ ಎಕ್ಸ್ ಪ್ರೆಸ್ ರೈಲಿನ ಬೋಗಿಗೆ ಬೆಂಕಿ ಹಚ್ಚಿದ್ದರು ಎಂದು ದೂರು ದಾಖಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com