ನೀರವ್ ಮೋದಿ ಆರೋಪ ತಳ್ಳಿಹಾಕಿದ ಪಿಎನ್ ಬಿ, ಕಾನೂನು ರೀತಿ ಕ್ರಮ ಖಚಿತ

ಬಹುಕೋಟಿ ವಂಚಕ ನೀರವ್ ಮೋದಿ ಆರೋಪವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಗುರುವಾರ ಸ್ಪಷ್ಟವಾಗಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಬಹುಕೋಟಿ ವಂಚಕ ನೀರವ್ ಮೋದಿ ಆರೋಪವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಗುರುವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಸಾಲ ಬಾಕಿ ವಸೂಲಿಗಾಗಿ ಎಲ್ಲಾ ರೀತಿಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಪಿಎನ್ ಬಿ ತನ್ನ ಸಾಲವನ್ನು ಸಾರ್ವಜನಿಕವಾಗಿ ಬಹಿರಂಗ ಮಾಡುವ ಮೂಲಕ ಬಾಕಿ ಇರುವ ಮೊತ್ತವನ್ನು ವಾಪಸ್ ಪಡೆಯುವ ಎಲ್ಲಾ ಆಯ್ಕೆಗಳನ್ನೂ ಇಲ್ಲವಾಗಿಸಿದೆ ಎಂದು ನೀರವ್ ಮೋದಿ ಆರೋಪಿಸಿದ್ದರು. 
ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪಿಎನ್ ಬಿ, ಕಾನೂನು ಪ್ರಕಾರ ಲಭ್ಯವಿರುವ ಎಲ್ಲಾ ಮಾರ್ಗಗಳನ್ನು ಅನುಸರಿಸಿ ನಾವು ಸಾಲ ಮರು ಪಾವತಿಗೆ ಸಂಬಂಧಿಸಿದಂತೆ ನೀರವ್ ಮೋದಿ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ ಎಂದು ಕಂಪನಿ ಕಾರ್ಯದರ್ಶಿ ಬಲ್ಬಿರ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಬ್ಯಾಂಕ್ ವಂಚನೆ ಮೊತ್ತದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಪಿಎನ್ ಬಿ, ಒಟ್ಟು 11,394.02 ಕೋಟಿ ರುಪಾಯಿ ವಂಚಿಸಿರುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಫೆಬ್ರವರಿ 13 ರಂದು ತಿಳಿಸಿದ್ದಾರೆ. ಫೆ.5ರಂದು ಪ್ರಾಥಮಿಕ ತನಿಖೆಯ ವರದಿ ಪ್ರಕಾರ, 280.70 ಕೋಟಿ ರುಪಾಯಿ. ಆದರೆ ತನಿಖೆ ವಿಸ್ತರಿಸಿದ ನಂತರ ವಂಚನೆ ಮೊತ್ತ 11,394.02 ಕೋಟಿ ರುಪಾಯಿಗೆ ತಲುಪಿದೆ ಎಂದು ಸ್ಪಷ್ಟಪಡಿಸಿದೆ.
ವಂಚನೆ ಪ್ರಕರಣ ಸಂಬಂಧ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿರುದ್ಧವೇ ಆರೋಪ ಮಾಡಿರುವ ನೀರವ್ ಮೋದಿ, ನಿಮ್ಮ ಬ್ಯಾಂಕ್ ಕೈಗೊಂಡಿರುವ ಕ್ರಮಗಳಿಂದ ನನ್ನ ಉದ್ಯಮದ ಬ್ರ್ಯಾಂಡ್ ಗೆ ಹೊಡೆತ ಬಿದ್ದಿದೆ, ನೀವು ಕೈಗೊಂಡಿರುವ ಕ್ರಮಗಳು ಸಾಲ ವಾಪಸ್ ಪಡೆದುಕೊಳ್ಳಲು ನಿಮಗೆ ಇದ್ದ ಆಯ್ಕೆಗಳೆಲ್ಲವೂ ಬಂದ್ ಆಗಿವೆ ಎಂದು ಕಿಡಿ ಕಾರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com