ಗಿಫ್ಟ್ ಪಾರ್ಸಲ್ ನಲ್ಲಿದ್ದ ಬಾಂಬ್ ಸ್ಫೋಟ: ವರ ಸಾವು, ವಧುವಿಗೆ ಗಂಭೀರ ಗಾಯ

ಗಿಫ್ಟ್ ಪಾರ್ಸಲ್ ನಲ್ಲಿದ್ದ ಬಾಂಬ್ ಸ್ಫೋಟಗೊಂಡು ವರ ಮೃತಪಟ್ಟಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಗಿಫ್ಟ್ ಪಾರ್ಸಲ್ ನಲ್ಲಿದ್ದ ಬಾಂಬ್ ಸ್ಫೋಟ: ವರ ಸಾವು, ವಧುವಿಗೆ ಗಂಭೀರ ಗಾಯ
Updated on: 
ಒಡಿಶಾ: ಗಿಫ್ಟ್ ಪಾರ್ಸಲ್ ನಲ್ಲಿದ್ದ ಬಾಂಬ್ ಸ್ಫೋಟಗೊಂಡು ವರ ಮೃತಪಟ್ಟಿರುವ ಘಟನೆ ಒಡಿಶಾದಲ್ಲಿ ನಡೆದಿದೆ. 
ಫೆ.23 ರಂದು ಈ ಘಟನೆ ಬೆಳಕಿಗೆ ಬಂದಿದ್ದು, ಫೆ.18 ರಂದು ವಿವಾಹವಾಗಿದ್ದ ವ್ಯಕ್ತಿ ತಮಗೆ ಬಂದಿದ್ದ ಉಡುಗೊರೆಗಳನ್ನು ತೆಗೆದು ನೋಡುತ್ತಿದ್ದರು.  ಈ ವೇಳೆ ತಮಗೆ ಅನಾಮಿಕ ವ್ಯಕ್ತಿಯೊಬ್ಬರು ಕಳಿಸಿದ್ದ ಗಿಫ್ಟ್ ಪಾರ್ಸಲ್ ನ್ನು ತೆಗೆದು ನೋಡಿದಾಗ ಅದರೊಳಗಿದ್ದ ಬಾಂಬ್ ಸ್ಫೋಟಗೊಂಡು ವರ ಹಾಗೂ ಆತನ ಅಜ್ಜಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ. 
ಒಡಿಶಾದ ಬ್ರಹ್ಮಪುರ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಘಟನೆ ನಡೆಯುತ್ತಿದ್ದಂತೆಯೇ ತೀವ್ರವಾಗಿ ಗಾಯಗೊಂಡಿದ್ದ ವರ ಹಾಗೂ ಆತನ ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಹ ಇಬ್ಬರು ಬದುಕುಳಿಯಲಿಲ್ಲ
ಇನ್ನು ಗಾಯಗೊಂಡ ವಧುವನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com