ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ವಿಶ್ವದ ಅತಿ ದೊಡ್ಡ ಮೆದುಳು ಗಡ್ಡೆ ಹೊರತೆಗೆದ ವೈದ್ಯರು

ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆಯ ನರರೋಗ ಶಸ್ತ್ರಚಿಕಿತ್ಸಕರು ವ್ಯಕ್ತಿಯೊಬ್ಬನ ಮೆದುಳಿನಲ್ಲಿದ್ದ 1.8 ಕೆ.ಜಿ ತೂಕದ ಬೃಹತ್ ಗಡ್ಡೆಯನ್ನು ಹೊರತೆಗೆದಿದ್ದಾರೆ. ಇದು ವಿಶ್ವದಲ್ಲಿ ಇದುವರೆಗೆ......
ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ವಿಶ್ವದ ಅತಿ ದೊಡ್ಡ ಮೆದುಳು ಗಡ್ಡೆ ಹೊರತೆಗೆದ ವೈದ್ಯರು
ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ವಿಶ್ವದ ಅತಿ ದೊಡ್ಡ ಮೆದುಳು ಗಡ್ಡೆ ಹೊರತೆಗೆದ ವೈದ್ಯರು
ಮುಂಬೈ: ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆಯ ನರರೋಗ ಶಸ್ತ್ರಚಿಕಿತ್ಸಕರು ವ್ಯಕ್ತಿಯೊಬ್ಬನ ಮೆದುಳಿನಲ್ಲಿದ್ದ 1.8 ಕೆ.ಜಿ ತೂಕದ ಬೃಹತ್ ಗಡ್ಡೆಯನ್ನು ಹೊರತೆಗೆದಿದ್ದಾರೆ. ಇದು ವಿಶ್ವದಲ್ಲಿ ಇದುವರೆಗೆ ಸಿಕ್ಕಿದ್ದ ದಾಖಲೆ ತೂಕದ ಮೆದುಳಿನ ಗಡ್ಡೆ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಬದೋಹಿಯಿಂದ ಮುಂಬೈಗೆ ಆಗಮಿಸಿದ್ದ ಸಂತಾಲ್ ಪಾಲ್ (31) ವಿಪರೀತವಾದ ತಲೆನೋವು, ತಲೆ ಭಾರ ಹಾಗೂ ಕಣ್ಣುಗಳ ದೃಷ್ಟಿ ಮಂದಗೊಳ್ಳುವಿಕೆ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
"ಇದೊಂದು ವಿಶಿಷ್ಟ ಪ್ರಕರಣ ಆಗಿದ್ದು ಸುಮಾರು ತಲೆ ಗಾತ್ರದಷ್ಟೇ ದೊಡ್ಡ ಗಡ್ಡೆಯು ಪತ್ತೆಯಾಗಿದೆ. ಈ ಗಡ್ಡೆಯನ್ನು ಹೊರತೆಗೆಯುವುದು ನಮಗೊಂದು ಸವಾಲಾಗಿತ್ತು." ನರಶಸ್ತ್ರಚಿಕಿತ್ಸೆಯ ವಿಭಾಗದ ಮುಖ್ಯಸ್ಥ ತ್ರಿಮೂರ್ತಿ ನಾಡಕರ್ಣಿ ಹೇಳಿದ್ದಾರೆ.
"ಈ ಶಸ್ತ್ರಚಿಕಿತ್ಸೆ ಸುಮಾರು ಏಳು ಗಂಟೆಗಳ ಕಾಲ ತೆಗೆದುಕೊಂಡಿತು. ಈ ವೇಳೆ ರೋಗಿಯ ದೇಹದಿಂದ ಅಪಾರ ಪ್ರಮಾಣದ ರಕ್ತ ಸೋರಿಕೆಯಾದ ಕಾರಣ ಅವರಿಗೆ ಹನ್ನೊಂದು ಯುನಿಟ್ ರಕ್ತ ನೀಡಬೇಕಾಯಿತು. ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನಾವು ಈ ರೋಗಿಯ ಮೆದುಳು ಗಡ್ಡೆಯು ಇದುವರೆಗೆ ಸಿಕ್ಕಿದ್ದ ಅತಿ ದೊಡ್ಡ ಗಾತ್ರಾ ಮೆದುಳು ಗಡ್ಡೆ ಎಂದು ನಂಬಿದ್ದೇವೆ" ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com