ಉತ್ತರಾಖಂಡ: 5 ಮಿಲಿ ಮೀಟರ್ ಪೆನ್ಸಿಲ್ ತಯಾರಿಸಿ ದಾಖಲೆ ಬರೆದ ಕಲಾವಿದ

ಉತ್ತರಾಖಂಡದ ಕಲಾವಿದನೊಬ್ಬ ವಿಶ್ವದ ಅತ್ಯಂತ ಪುಟ್ಟ ಪೆನ್ಸಿಲ್ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಡೆಹ್ರಾಡೂನ್: ಉತ್ತರಾಖಂಡದ ಕಲಾವಿದನೊಬ್ಬ ವಿಶ್ವದ ಅತ್ಯಂತ ಪುಟ್ಟ ಪೆನ್ಸಿಲ್ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ.
ಉತ್ತರಾಖಂಡದ ಹಲ್ದ್ ವಾನಿ ಮೂಲದ ಮೈಕ್ರೋ ಆರ್ಟಿಸ್ಟ್ ಪ್ರಕಾಶ್ ಚಂದ್ರ ಉಪಾಧ್ಯಾಯ ಎಂಬುವವರು ವಿಶ್ವದ ಅತ್ಯಂತ ಪುಟ್ಟ ಪೆನ್ಸಿಲ್ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಪ್ರಕಾಶ್ ಚಂದ್ರ ಉಪಾಧ್ಯಯ ಅತ್ಯಂತ ಪುಟ್ಟ ಅಂದರೆ ಸುಮಾರು 5 ಮಿಲಿ ಮೀಟರ್ ಉದ್ಧದ ಮತ್ತು 0.5 ಮಿಲಿ ಮೀಟರ್ ಸುತ್ತಳತೆಯ ಪೆನ್ಸಿಲ್ ತಯಾರಿಸಿ ವಿಶ್ವ ದಾಖಲೆ ಬರೆದಿದ್ದಾರೆ.
ಇದೇ ಪುಟ್ಟ ವಸ್ತುಗಳ ತಯಾರಿಕೆ ಮೂಲಕವೇ ಪ್ರಕಾಶ್ ಚಂದ್ರ ಉಪಾಧ್ಯಾಯ ಅವರು ಈ ಹಿಂದೆ  ಹಲವು ದಾಖಲೆಗಳನ್ನು ಬರೆದಿದ್ದು, ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದೀಗ ಅವರ ಪುಟ್ಟ ಪೆನ್ಸಿಲ್ ಇದೀಗ ಮತ್ತೊಮ್ಮೆ ಅವರನ್ನು ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com