ಸಾರ್ವಜನಿಕ ವಲಯ ಬ್ಯಾಂಕ್ ಗಳ ಖಾಸಗೀಕರಣವಿಲ್ಲ: ಅರುಣ್ ಜೈಟ್ಲಿ

ಸಾರ್ವಜನಿಕ ವಲಯ ಬ್ಯಾಂಕುಗಳ ಖಾಸಗೀಕರಣವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಸಾಂದರ್ಭಿಕ ಚಿತ್ರ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಸಾಂದರ್ಭಿಕ ಚಿತ್ರ

ನವದೆಹಲಿ:  ಸಾರ್ವಜನಿಕ ವಲಯ ಬ್ಯಾಂಕುಗಳ ಖಾಸಗೀಕರಣವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಎಕನಾಮಿಕ್ ಟೈಮ್ಸ್ ಜಾಗತಿಕ ವ್ಯವಹಾರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಪಂಜಾಬ್ ನ್ಯಾಷನಲ್ ಬ್ಯಾಂಕಿನ 11.400 ಕೋಟಿ ರೂ. ಹಗರಣದ ನಂತರ ಬ್ಯಾಂಕುಗಳ ಖಾಸಗೀಕರಣದ ಬಗ್ಗೆ ಹಲವು ಜನ ಮಾತನಾಡುತ್ತಿದ್ದಾರೆ. ಆದರೆ, ಖಾಸಗೀಕರಣಕ್ಕೆ ರಾಜಕೀಯ ಪಕ್ಷಗಳ ಒಪ್ಪಿಗೆ ಬೇಕಾಗುತ್ತದಲ್ಲದೇ, ಬ್ಯಾಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ
ತರಬೇಕಾಗುತ್ತದೆ  ಇದೊಂದು ಸವಾಲಿನ ಕೆಲಸ ಎಂದರು.

 ಬ್ಯಾಂಕುಗಳ ಖಾಸಗೀಕರಣ ಸಂಬಂಧ ನಿನ್ನೆ ಅರುಣ್ ಜೇಟ್ಲಿ ಅವರೊಂದಿಗೆ ನಿನ್ನೆ ಮಾತುಕತೆ ನಡೆಸಿದ್ದು, 2-3 ಪ್ರಮುಖ ಬ್ಯಾಂಕುಗಳನ್ನು ಹೊರತುಪಡಿಸಿ, ಉಳಿದ ಬ್ಯಾಂಕುಗಳನ್ನು ಹಂತಹಂತವಾಗಿ  ಖಾಸಗೀಕರಣಗೊಳಿಸುವಂತೆ ಪ್ರಸ್ತಾವ ಮಾಡಲಾಗಿದೆ ಎಂದು  ಎಫ್ ಐಸಿಸಿಐ  ಅಧ್ಯಕ್ಷ ರಾಶೇಶ್ ಶಾ ಹೇಳಿದ್ದರು.

 ಸಾರ್ವಜನಿಕ ಬ್ಯಾಂಕುಗಳಲ್ಲಿನ ಪಾಲನ್ನು ಶೇಕಡ 50 ರಷ್ಟು ಇಳಿಸುವಂತೆ ಅಶೋಚಾಮ್ ಸರ್ಕಾರವನ್ನು ಒತ್ತಾಯಿಸಿತ್ತು. ಬ್ಯಾಂಕುಗಳ ಖಾಸಗೀಕರಣಕ್ಕೆ ಹಲವು ಉದ್ಯಮ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com