
ಪುಣೆ: ಡಾರ್ವಿನ್ ಜೀವವಿಕಾಸ ಸಿದ್ದಾಂತ ಅವೈಜ್ಞಾನಿಕವಾಗಿದೆ. ಇದನ್ನು ಶಾಲಾ, ಹಾಗೂ ಕಾಲೇಜು ಪಠ್ಯಕ್ರಮಗಳಲ್ಲಿ ಬದಲಾವಣೆ ಮಾಡಬೇಕಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಕಳೆದ ತಿಂಗಳು ನೀಡಿದ್ದ ಹೇಳಿಕೆ ವಿಜ್ಞಾನ ಕ್ಷೇತ್ರದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.
ಮಂಗನಿಂದ ಮಾನವ ನೋಡಿರಲು ಸಾಧ್ಯವೇ ಇಲ್ಲ , ನಮ್ಮ ಪೂರ್ವಿಕರು ಸೇರಿದಂತೆ ಎಲ್ಲ ಮಾನವರು ಮಾನವನಾಗಿಯೇ ಹುಟ್ಟಿದ್ದಾರೆ ಎಂದು ವಾದಿಸಿದ್ದರು.
ಆದರೆ, ಪುಣೆಯ ಭಾರತೀಯ ವಿಜ್ಞಾನ ಸಂಸ್ಥೆ ಅರ್ಧವಾರ್ಷಿಕ ಸೆಮಿಸ್ಟರ್ ಪರೀಕ್ಷೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಈ ವಿಷಯ ಕುರಿತ ಪ್ರಶ್ನೆ ಕೇಳಲಾಗಿದೆ. ಡಾರ್ವಿನ್ ಸಿದ್ಧಾಂತ ಕುರಿತು ಸತ್ಯಪಾಲ್ ಸಿಂಗ್ ವಾದದಲ್ಲಿ ತಪ್ಪೇನಿದೆ ಎಂದು ಕೇಳಿದೆ.
ಭಾರತೀಯ ವಿಜ್ಞಾನ ಸಂಸ್ಥೆಯ ಶಿಕ್ಷಣ ಮತ್ತು ಸಂಶೋಧನಾ ವಿಭಾಗ ಇದೇ ತಿಂಗಳ 22 ರಂದು ಪದವಿ ವಿದ್ಯಾರ್ಥಿಗಳಿಗೆ ನಡೆಸಿದ ಸೆಮಿಸ್ಟರ್ ಪರೀಕ್ಷೆಯಲ್ಲಿ ಈ ಸಂಬಂಧ ಪ್ರಶ್ನೆ ಕೇಳಲಾಗಿದೆ. ಸತ್ಯಪಾಲ್ ವಾದದಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಕೇಳಲಾಗಿದೆ.
ವಿದ್ಯಾರ್ಥಿಗಳ ಚಿಂತನಾ ಕ್ರಮ ಪರಿಶೀಲಿಸುವ ದೃಷ್ಟಿಯಿಂದ ಡಾರ್ವಿನ್ ಸಿದ್ಧಾಂತ ಕುರಿತು ಸತ್ಯಪಾಲ್ ಸಿಂಗ್ ವಾದದಲ್ಲಿ ತಪ್ಪೇನಿದೆ ಅಂತಾ ಪರೀಕ್ಷೆಯಲ್ಲಿ ಕೇಳಲಾಗಿತ್ತು ಎಂದು ಭಾರತೀಯ ವಿಜ್ಜಾನ ಸಂಸ್ಥೆಯ ಸಂಶೋಧಾನ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಸಂಜೀವ್ ಗಾಳಂದೆ ಹೇಳುತ್ತಾರೆ.
Advertisement