ಗುಜರಾತ್: ಬಿಎಸ್ಎಫ್ ನಿಂದ ಪಾಕಿಸ್ತಾನದ ಮೀನುಗಾರಿಕಾ ದೋಣಿ ವಶ

ಗುಜರಾತ್ ನ ಗಡಿ ಜಿಲ್ಲೆ ಕಛ್ ನಲ್ಲಿ ಪಾಕಿಸ್ತಾನಕ್ಕೆ ಸೇರಿದ್ದ ಮೀನುಗಾರಿಕಾ ದೋಣಿಯೊಂದನ್ನು ಬಿಎಸ್ಎಫ್ ಪಡೆಗಳು ವಶಕ್ಕೆ ಪಡೆದಿದೆ ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿದೆ.
ಗುಜರಾತ್: ಬಿಎಸ್ಎಫ್ ನಿಂದ ಪಾಕಿಸ್ತಾನದ ಮೀನುಗಾರಿಕಾ ದೋಣಿ ವಶ
ಗುಜರಾತ್: ಬಿಎಸ್ಎಫ್ ನಿಂದ ಪಾಕಿಸ್ತಾನದ ಮೀನುಗಾರಿಕಾ ದೋಣಿ ವಶ
ಭೂಚ್ (ಗುಜರಾತ್): ಗುಜರಾತ್ ನ ಗಡಿ ಜಿಲ್ಲೆ ಕಛ್ ನಲ್ಲಿ ಪಾಕಿಸ್ತಾನಕ್ಕೆ ಸೇರಿದ್ದ ಮೀನುಗಾರಿಕಾ ದೋಣಿಯೊಂದನ್ನು ಬಿಎಸ್ಎಫ್ ಪಡೆಗಳು ವಶಕ್ಕೆ ಪಡೆದಿದೆ ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿದೆ.
ಶನಿವಾರ ರಾತ್ರಿ ವಶಪಡಿಸಿಕೊಳ್ಳಲಾದ ದೋಣಿಯು ಸಾಮಾನ್ಯವಾಗಿ ಬಿಎಸ್ಎಫ್ ಇದುವರೆಗೆ ವಶಪಡಿಸಿಕೊಂಡಿದ್ದ ಮೀನುಗಾರಿಕೆ ದೋಣಿಗಳಿಗಿಂತ ದೊಡ್ಡದಿದೆ. 108 ಬೆಟಾಲಿಯನ್ ನ ಗಸ್ತು ಪಡೆಗಳು ಈ ದೋಣಿಯನ್ನು ಪತ್ತೆ ಮಾಡಿದ್ದು ಇದರಲ್ಲಿ ಅನುಮಾನಾಸ್ಪದ ವಸ್ತುಗಳಾವುದು ಇರಲಿಲ್ಲ. ಕೇವಲ ಮೀನುಗಾರಿಕೆಗೆ ಉಪಯೋಗಿಸುವ ಸಲಕರಣೆಗಳು ಹಾಗೂ ಮೀನುಗಳಿದ್ದವು ಎಂದು ಹಿರಿಯ ಬಿಎಸ್ಎಫ್ ಅಧಿಕಾರಿಗಳು ಹೇಳಿದ್ದಾರೆ.
ಫೆ.20ರಂದು ಕೋಟವಾರಿ ಪ್ರದೇಶದಲ್ಲಿ ಇದೇ ರೀತಿಯ ದೊಡ್ಡ ಮೀನುಗಾರಿಕಾ ದೋಣಿಯನ್ನು ಬಿಎಸ್ಎಫ್  ವಶಕ್ಕೆ ಪಡೆದಿತ್ತು. ಅದರಲ್ಲಿಯೂ ಸಹ ಯಾವ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರ;ಲಿಲ್ಲ.
ಇದಕ್ಕೂ ಹಿಂದೆ ಕಛ್ ಜಿಲ್ಲೆ ಜಖಾವು ಕರಾವಳಿ ಪ್ರದೇಶದಲ್ಲಿ ಕರಾವಳಿ ರಕ್ಷಣಾ ಪಡೆಗಳು ಫೆ. 13ರಂದು ಪಾಕಿಸ್ತಾನಕ್ಕೆ ಸೇರಿದ್ದ ಏಳು ಮೀನುಗಾರರನ್ನು ಬಂಧಿಸಿ ಅವರ ದೋಣಿಯನ್ನು ವಶಕ್ಕೆ ಪಡೆದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com