ಇದಕ್ಕೂ ಮುನ್ನ ಫೆ.15ರಂದು ಹೊಟ್ಟೆ ನೋವು ಹಾಗೂ ಆಹಾರ ಸಮಸ್ಯೆ ಕಾರಣಕ್ಕಾಗಿ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆ ಸಂದರ್ಭದಲ್ಲಿ ಅವರು ಮೇದೋಜೀರಕ ಗ್ರಂಥಿ ಸಮಸ್ಯೆಗಾಗಿ ಚಿಕಿತ್ಸೆ ಹೊಂದಿದ್ದರೆಂದು ಅವರ ಕಛೇರಿ ಮೂಲಗಳು ವರದಿ ನೀಡಿದ್ದವು.ಬಜೆಟ್ ಅಧಿವೇಶನದ ಬಳಿಕ ತಮ್ಮ ಆರೋಗ್ಯದ ಕುರಿತಂತೆ ಪ್ರಶ್ನಿಸಿದ್ದಾಗಲೂ ಪರಿಕ್ಕರ್ "ನನಗೆ ಅಂತಹಾ ಯಾವ ದೊಡ್ಡ ಆರೋಗ್ಯ ಸಮಸ್ಯೆ ಇಲ್ಲ, ನಾನು ಚೆನ್ನಾಗಿದ್ದೇನೆ" ಎಂದು ಭರವಸೆಯಿಂದ ನುಡಿದಿದ್ದರು.