ಪಿಎನ್ ಬಿ ವಂಚನೆ: ನೀರವ್ ಮೋದಿ ಸಾಗರೋತ್ತರ ವ್ಯವಹಾರ ತನಿಖೆಗೆ ಇಡಿ ಮನವಿ ನ್ಯಾಯಾಲಯದಿಂದ ಪುರಸ್ಕೃತ

ಹನ್ನೊಂದು ಸಾವಿರ ಕೋಟಿ ರೂ. ಪಿಎನ್ ಬಿ ವಂಚನೆ ಪ್ರಕರಣದ ಸಂಬಂಧ ನೀರವ್ ಮೋದಿ ವಿದೇಶೀ ವ್ಯವಹಾರಗಳು ಹಾಗೂ ಆಸ್ತಿಗಳ ಬಗೆಗೆ ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯವು........
ನೀರವ್ ಮೋದಿ
ನೀರವ್ ಮೋದಿ
Updated on: 
ಮುಂಬೈ: ಹನ್ನೊಂದು ಸಾವಿರ ಕೋಟಿ ರೂ. ಪಿಎನ್ ಬಿ ವಂಚನೆ ಪ್ರಕರಣದ ಸಂಬಂಧ ನೀರವ್ ಮೋದಿ ವಿದೇಶೀ ವ್ಯವಹಾರಗಳು ಹಾಗೂ ಆಸ್ತಿಗಳ ಬಗೆಗೆ ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯವು ಲೆಟರ್ಸ್ ರೋಗರೇಟರಿ(ಎಲ್ ಆರ್ ಎಸ್) ಜಾರಿಗೊಳಿಸಲು ವಿಶೇಷ ನ್ಯಾಯಾಲಯ ಅನುಮತಿ ನೀಡೀದೆ.
ಜಾರಿ ನಿರ್ದೇಶನಾಲಯ ಹಾಗೂ ಇತರೆ ತನಿಖಾ ತಂಡಗಳು ತನಿಖೆ ನಡೆಸುತ್ತಿರುವ ಪಿಎನ್ ಬಿ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಪ್ರಮುಖ ಆರೋಪಿಯಾಗಿದ್ದಾರೆ. ಇಂದು ಮುಂಜಾನೆ ಕೇಂದ್ರೀಯ ತನಿಖಾ ತಂಡವು ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ವಿಚಾರಣೆ ನಡೆಸುವಂತೆ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹಿತ್ಲೆನ್ ವೆನಗಾಂವಕರ್ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶ ಎಂಎಸ್ ಅಜ್ಮಿ ಜಾರಿ ನಿರ್ದೇಶನಾಲಯದ ಮನವಿಯನ್ನು ಪುರಸ್ಕರಿಸಿದ್ದಾರೆ.
ಪಿಎಂಎಲ್ ಎ ಕಾಯ್ದೆ ಅಡಿಯಲ್ಲಿ ಎಲ್ ಆರ್ ಎಸ್ ಜಾರಿ ಮಾಡುವುದು ಹಾಂಗ್ ಕಾಂಗ್, ಅಮೆರಿಕಾ, ಬ್ರಿಟನ್, ಯುಎಇ, ದಕ್ಷಿಣ ಆಪ್ರಿಕಾ ಹಾಗೂ ಸಿಂಗಾಪುರದಲ್ಲಿ ತನಿಖೆ ನಡೆಸುವುದು, ವಂಚನೆಗೆ ಸಂಬಂಧಿಸಿ ದಾಖಲೆ ಸಂಗ್ರಹಣೆ, ಸಾಕ್ಷಿ ಸಂಗ್ರಹ ಮಾಡುವುದನ್ನು ಪ್ರಮುಖ ಉದ್ದೇಶವಾಗಿ ಹೊಂದಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಎಲ್ ಆರ್ ಎಸ್ ಎನ್ನುವುದು ಒಂದು ಸಾರ್ವಭೌಮ ರಾಷ್ಟ್ರದ ನ್ಯಾಯಾಲಯವು ಇನ್ನೊಂದು ಸಾರ್ವಭೌಮ ರಾಷ್ಟ್ರದ ನ್ಯಾಯಾಲಯಕ್ಕೆ ನ್ಯಾಯಾಂಗದ ನೆರವಿಗಾಗಿ ಮಾಡುವ ಮನವಿಯಾಗಿದೆ.ನೀರವ್ ಮೋದಿ ಹಲವು ರಾಷ್ಟ್ರಗಳಲ್ಲಿ ವಜ್ರದ ವ್ಯಾಪಾರ ಸೇರಿ ಅನೇಕ ವ್ಯವಹಾರಗಳಲ್ಲಿ ತೊಡಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿದೆ.
ಅವರು ಹಾಂಗ್ ಕಾಂಗ್, ಅಮೆರಿಕಾ, ಬ್ರಿಟನ್ ಸೇರಿದಂತೆ  ವಿವಿಧ ದೇಶಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ.ಪಿಎನ್ ಬಿ ಕಳಿಸಿದ್ದ ಸಂದೇಶದ ಅನುಸಾರ ಬ್ಯಾಂಕ್ ನಿಂದ ಅನೇಕ ಬಾರಿ ಸಾಲ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸ್ಪಷ್ಟವಾಗಿ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com