ಬೆಳಿಗ್ಗೆ 7 ರಿಂದಲೇ ಮತದಾನ ಪ್ರಾರಂಭವಾದರೂ ಕೆಲವು ಮತದಾನ ಕೇಂದ್ರಗಳಲ್ಲಿ ಲೋಪದೋಷ ಕಾಣಿಸಿದ್ದರಿಂದ ಮತದಾನ ಕೆಲವು ಭಾಗಗಳಲ್ಲಿ ವಿಳಂಬವಾಗಿದೆ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ. ರಾಜ್ಯದ ಯಾವುದೇ ಭಾಗಗಳಲ್ಲಿಯೂ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ, ಮತದಾನ ಸಂಜೆ 4 ವರೆಗೂ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.