ಎನ್ ಡಿಎ ತೊರೆದ ಬಿಹಾರ ಮಾಜಿ ಸಿಎಂ ಜಿತನ್ ರಾಮ್ ಮಾಂಜಿ

: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದೂಸ್ತಾನಿ ಆವಂ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಾಂಜಿ ಎನ್ ಡಿಎ ಮೈತ್ರಿಕೂಟ ತೊರೆದಿದ್ದಾರೆ....
ಜಿತನ್ ರಾಮ್ ಮಾಂಜಿ
ಜಿತನ್ ರಾಮ್ ಮಾಂಜಿ
ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದೂಸ್ತಾನಿ ಆವಂ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಾಂಜಿ  ಎನ್ ಡಿಎ ಮೈತ್ರಿಕೂಟ ತೊರೆದಿದ್ದಾರೆ.
ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಜೊತೆಗಿನ ಮಾತುಕತೆ ನಂತರ ಮಾಂಜಿ ತಮ್ಮ ನಿರ್ಧಾರ ಪ್ರಕಟವಾಗಿದೆ.
ಮೀಸಲಾತಿ ಮತ್ತು ಸಂವಿಧಾನ ಎಂಬ ಎರಡು ವಿಷಯಗಳನ್ನು ಮುಂದಿಟ್ಟುಕೊಂಡಿರುವ ಎನ್ ಡಿಎ ದೇಶದ ಜನತೆಯನ್ನು ಒಡೆಯುತ್ತಿದೆ, ದಲಿತರ ಮೇಲಿನ ದೌರ್ಜನ್ಯ ಮತ್ತು ಬಡತನ ಸಮಸ್ಯೆಗಳು ಪ್ರತಿ ದಿನ ಹೆಚ್ಚಾಗುತ್ತಿವೆ. ಬಿಹಾರಕ್ಕೆ ವಿಶೇಷ ಪ್ರಾತಿನಿದ್ಯ ನೀಡಲಾಗಿಲ್ಲ, ಜೊತೆಗೆ ಬಜೆಟ್ ನಲ್ಲಿ ಘೋಷಿಸಲಾದ ಹಲವು ನೀತಿಗಳನ್ನು ಇನ್ನೂ  ಅನುಷ್ಠಾನಕ್ಕೆ ತಂದಿಲ್ಲ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಮಾಂಜಿ ತನ್ನ ತಂದೆ ಲಾಲು ಪ್ರಸಾದ್ ಯಾದವ್ ಅವರ ಆಪ್ತರಾಗಿದ್ದಾರೆ, ಈ ಹಿಂದೆ ಜೊತೆಯಾಗಿ ಕೆಲಸ ಮಾಡಿದ್ದಾರೆ ಎಂದು ಹೇಳುವ ಮೂಲಕ ಬಿಹಾರ ಮಹಾ ಮೈತ್ರಿಗೆ ಕೈಜೋಡಿಸುವ ಸುಳಿವು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com