ಕಮಲ್ ಹಾಸನ್
ದೇಶ
ರಾಜಕೀಯದಲ್ಲಿ ಕಮಲ್ ಕಮಾಲ್, ಪಕ್ಷದ ವೆಬ್ ಸೈಟ್ ಪ್ರಾರಂಭವಾದ 48 ಗಂಟೆಗಳಲ್ಲಿ 2 ಲಕ್ಷ ಜನ ನೊಂದಣಿ
ಜನಪ್ರಿಯ ನಟರಾಗಿದ್ದು ಇದೀಗ ರಾಜಕಾರಣಿಯಾಗಿ ಬದಲಾಗಿರುವ ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನೀಧಿ ಮಯ್ಯಂ'ಗೆ ನಲವತ್ತೆಂಟು ಗಂಟೆಗಳಲ್ಲಿ 201,597 ಮಂದಿ.....
ಚೆನ್ನೈ: ಜನಪ್ರಿಯ ನಟರಾಗಿದ್ದು ಇದೀಗ ರಾಜಕಾರಣಿಯಾಗಿ ಬದಲಾಗಿರುವ ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನೀಧಿ ಮಯ್ಯಂ'ಗೆ 48 ಗಂಟೆಗಳಲ್ಲಿ 201,597 ಮಂದಿ ಆನ್ ಲೈನ್ ಮೂಲಕ ನೊಂದಾವಣೆಯಾಗಿದ್ದಾರೆ ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ.
ಈ ಸಂಬಂಧ ಪಕ್ಷದ ಡಿಜಿಟಲ್ ವಿಭಾಗವು ಗೂಗಲ್ ಡೇಟಾ ಅನಲಿಟಿಕ್ಸ್ ಅನ್ನು ಹಂಚಿಕೊಂಡಿದೆ.ಪಕ್ಷದ ಜಾಲತಾಣ ಪ್ರಾರಂಭಗೊಂಡ ನಲವತ್ತೆಂಟು ಗಂಟೆಗಳ ಅವಧಿಯ ಡೇಟಾವನ್ನು ಹಂಚಿಕೊಳ್ಳಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.
ಫೆ.21ರಂದು ಕಮಲ್ ಹಾಸನ್ ಮಧುರೈ ನಲ್ಲಿ ಎಮ್ಎನ್ಎಂ ಅನ್ನು ಔಪಚಾರಿಕವಾಗಿ ಪ್ರಾರಂಭಿಸಿದ್ದರು. ಅದೇ ದಿನ ಸಂಜೆ 7.27ಕ್ಕೆ ಜಾಲತಾಣ ಪ್ರಾರಂಭಗೊಂಡಿತ್ತು. ಆದರೆ ಇದುವರೆಗೆ ನೊಂದಾಯಿತರಾದವರಲ್ಲಿ ಎಷ್ಟು ಮಂದಿ ತಮಿಳು ನಾಡಿನ ಮತದಾರರಾಗಿದ್ದಾರೆ ಎನ್ನುವ ಮಾಹಿತಿ ಇಲ್ಲ.
ಪಕ್ಷದ ಮೂಲದ ಪ್ರಕಾರ ಎಂಎನ್ಎಮ್ ಜಾಲತಾಣವು ಅಮೆರಿಕಾ, ಭಾರತ, ಕೆನಡಾ, ಬ್ರಿಟನ್, ಯುಎಇ, ಸಿಂಗಾಪುರದಂತಹಾ ರಾಷ್ಟ್ರಗಳ ಜನರನ್ನು ಆಕರ್ಷಿಸಿದೆ.


