ಅಯೋಧ್ಯೆ ವಿವಾದ; ಒಳ್ಳೆಯದನ್ನು ತಡೆಯಲು ಸಾಧ್ಯವಿಲ್ಲ- ಶ್ರೀ ರವಿಶಂಕರ್ ಗುರೂಜಿ

ಅಯೋಧ್ಯೆ ವಿವಾದ ಕುರಿತು ಸೌಹಾರ್ದಯುತವಾದ ಪರಿಹಾರ ಕಂಡುಕೊಳ್ಳುವಲ್ಲಿ ನನ್ನ ಪ್ರಯತ್ನಗಳು ಮುಂದುವರೆಯಲಿದ್ದು, ಇದರಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಗುರುವಾರ ಹೇಳಿದ್ದಾರೆ...
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ
ಸಿದ್ಧಾರ್ಥ್ ನಗರ: ಅಯೋಧ್ಯೆ ವಿವಾದ ಕುರಿತು ಸೌಹಾರ್ದಯುತವಾದ ಪರಿಹಾರ ಕಂಡುಕೊಳ್ಳುವಲ್ಲಿ ನನ್ನ ಪ್ರಯತ್ನಗಳು ಮುಂದುವರೆಯಲಿದ್ದು, ಇದರಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಗುರುವಾರ ಹೇಳಿದ್ದಾರೆ. 
ಅಯೋಧ್ಯೆ ವಿವಾದ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಒಳ್ಳೆಯ ಕೆಲಸಗಳು ನಡೆಯುತ್ತಿರುವಾಗ ಸಮಸ್ಯೆಗಳು ಎದುರಾಗುವುದು ಸಾಮಾನ್ಯವಾಗಿರುತ್ತದೆ. ಆದರೆ, ಸಮಸ್ಯೆಗಳಿಗೆ ಹೆದರಿ ನಾನು ಹಿಂದಕ್ಕೆ ಸರಿಯುವುದಿಲ್ಲ. ಉತ್ತಮ ಕಾರ್ಯಕ್ಕಾಗಿ ನನ್ನ ಪ್ರಯತ್ನಗಳು ಮುಂದುವರೆಯುತ್ತವೆ. ಪ್ರತಿಯೊಬ್ಬರ ನಡುವಯೊ ನಾವು ಉತ್ತಮ ಸಂಬಂಧವನ್ನು ಹೊಂದಿದ್ದೇವೆಂದು ತಿಳಿಸಿದ್ದಾರೆ. 
ಅಯೋಧ್ಯೆ ವಿವಾದ ಸಂಬಂಧ ರವಿಶಂಕರ್ ಗುರೂಜಿಯವರ ಕೆಲ ದಿನಗಳ ಹಿಂದಷ್ಟೇ ಸಮಾಲೋಚನಾ ಸಭೆಯನ್ನು ನಡೆಸಿದ್ದರು. ಸಬೆಯಲ್ಲಿ ಎಐಎಂಪಿಎಲ್'ಬಿ) ಕಾರ್ಯಕಾರಿ ಸದಸ್ಯ ಮೌಲಾನ ಸೈಯದ್ ಸಲ್ಮಾನ್ ಹುಸೇನ್ ನದ್ವಿ, ಉತ್ತರಪ್ರದೇಶದ ಸುನ್ನಿ ಸಂಟ್ರಲ್ ವಕ್ಫ್ ಮಂಡಳಿಯ ಅಧ್ಯಕ್ಷ ಝಾಫರ್ ಫಾರೂಕಿ, ಲಖನೌದ ತೆಲೈ ವಾಲಿ ಮಸೀದಿಯ ಮೌಲಾನ ವಾಸೀಫ್ ಹಸನ್, ನಿವೃತ್ತ ಐಎಎಸ್ ಅದಿಕಾರಿ ಅನೀಸ್ ಅನ್ಸಾರಿ, ಸಿಒಆರ್'ಡಿ ನಿರ್ದೇಶಕ ಅತರ್ ಹುಸೇನ್ ಸಿದ್ದಿಕ್ಕಿ, ಉದ್ಯಮಿ ಎ.ಆರ್. ರೆಹಮಾನ್ ಸೇರಿದಂತೆ ಮತ್ತಿತರ ಮುಖಂಡರು ಭಾಗವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com