ಕಲ್ಲಿದ್ದಲು ಹಗರಣ: ಮಧು ಖೋಡಾ ಶಿಕ್ಷೆಗೆ ದೆಹಲಿ ಹೈ ಕೋರ್ಟ್ ತಡೆಯಾಜ್ಞೆ

ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾಗೆ ವಿಶೇಷ ನ್ಯಾಯಾಲಯ ನೀಡಿದ್ದ ಮೂರು ವರ್ಷಗಳ ಜೈಲುವಾಸ ಶಿಕ್ಷೆಗೆ.......
ಮಧು ಖೋಡಾ
ಮಧು ಖೋಡಾ
ನವದೆಹಲಿ: ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾಗೆ ವಿಶೇಷ  ನ್ಯಾಯಾಲಯ ನೀಡಿದ್ದ ಮೂರು ವರ್ಷಗಳ ಜೈಲುವಾಸ ಶಿಕ್ಷೆಗೆ ದೆಹಲಿ ಹೈ ಹೈಕೋರ್ಟ್ ತಡೆಯಾಜ್ಞೆ ನೀಡಿದೆ .ಸಿಬಿಐ ಮನವಿಯ ಹಿನ್ನೆಲೆಯಲ್ಲಿ ತಡೆಯಾಜ್ಞೆ ನಿಡಲಾಗಿದ್ದು ಜ.22ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.
ನ್ಯಾಯಮೂರ್ತಿ ಅನು ಮಲ್ಹೋತ್ರ ಅವರು ಖೋಡಾ ಅವರಿಗೆ 25 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.ಇನ್ನು ಈ ತಿಂಗಳಿರುವ ಮುಂದಿನ ವಿಚಾರಣೆವರೆಗೆ ಅವರು ದೇಶ ಬಿಟ್ಟು ತೆರಳುವಂತಿಲ್ಲ ಎನ್ನುವ ಷರತ್ತಿನ ಮೇಲೆ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.  ತಮ್ಮ ಶಿಕ್ಷೆಯನ್ನು ಅಮಾನತ್ತಿನಲ್ಲಿಡಬೇಕು, ಮುಂದಿನ ವಿಚಾರಣೆವರೆಗೆ ಜಾಮೀನು ನೀಡಬೇಕೆಂದು ಕೋರಿ ಖೋಡಾ ಹೈ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು.
ಕೊಲ್ಕತ್ತಾ ಮೂಲದ ಕಂಪೆನಿ ವಿನಿ ಐರನ್ ಮತ್ತು ಸ್ಟೀಲ್ ಉದ್ಯೋಗ್ ಲಿಮಿಟೆಡ್ (ವಿಐಎಸ್ ಯುಎಲ್) ಗೆ ಜಾರ್ಖಂಡ್ ಮೂಲದ ಕಲ್ಲಿದ್ದಲು ಬ್ಲಾಕ್ನ ವಿತರಣೆಯಲ್ಲಿ ಭ್ರಷ್ಟಾಚಾರ ಮತ್ತು ಪಿತೂರಿ ನಡೆಸಿದ್ದಾರೆ, ಇದು ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಕೋರ್ಟ್ ಒಪ್ಪಿಕೊಂಡಿದೆ.ಈ ಹಿಂದೆ ವಿಶೇಷ ನ್ಯಾಯಾಲಯ ಖೋಡಾ ಅವರಿಗೆ ಜ.18ರವರೆಗೆ ಜಾಮೀನು ನೀಡಿ ಆದೇಶಿಸಿತ್ತು.
ಇದೀಗ ಹೈ ಕೋರ್ಟ್ ಅವರಿಗೆ 22ರವರೆಗೆ ಜಾಮೀನು ನೀಡಿದ್ದು ಖೇಡಾ ತುಸು ನಿರಾಳವಾಗುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com