ರಾಜ್ಯಸಭೆಗೆ ಆಪ್ ನಿಂದ ಅಕೌಂಟೆಂಟ್ ಎನ್ ಡಿ ಗುಪ್ತ, ಶಿಕ್ಷಣತಜ್ಞ ಸುಶೀಲ್ ಗುಪ್ತಾ, ಸಂಜಯ್ ಸಿಂಗ್ ಸ್ಪರ್ಧೆ

ರಾಜ್ಯಸಭೆಗೆ ಆಮ್ ಆದ್ಮಿ ಪಕ್ಷ ಅಕೌಂಟೆಂಟ್, ಶಿಕ್ಷಣತಜ್ಞ, ಸಂಜಯ್ ಸಿಂಗ್ ಸೇರಿ ಒಟ್ಟು 3 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಆಮ್ ಆದ್ಮಿ ಪಕ್ಷ
ಆಮ್ ಆದ್ಮಿ ಪಕ್ಷ
Updated on: 
ನವದೆಹಲಿ: ರಾಜ್ಯಸಭೆಗೆ ಆಮ್ ಆದ್ಮಿ ಪಕ್ಷ ಅಕೌಂಟೆಂಟ್, ಶಿಕ್ಷಣ ತಜ್ಞ, ಸಂಜಯ್ ಸಿಂಗ್ ಸೇರಿ ಒಟ್ಟು 3 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 
ಸಂಜಯ್ ಸಿಂಗ್ ಆಮ್ ಆದ್ಮಿ ಪಕ್ಷ ಸ್ಥಾಪನೆಯಾದಾಗಿನಿಂದಲೂ ಪಕ್ಷದ ಜೊತೆ ಗುರುತಿಸಿಕೊಂಡಿದ್ದರೆ, ಸುಶೀಲ್ ಗುಪ್ತಾ ದೆಹಲಿ ಮೂಲದ ಉದ್ಯಮಿಯಾಗಿದ್ದಾರೆ, ಮತ್ತೋರ್ವ ಅಭ್ಯರ್ಥಿ ಎನ್ ಡಿ ಗುಪ್ತ ಚಾರ್ಟೆಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ನಡೆದ ಪಿಎಸಿ ಸಭೆಯಲ್ಲಿ ಈ ಮೂವರನ್ನೂ ಕಣಕ್ಕಿಳಿಸುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಶೀಲ್ ಗುಪ್ತಾ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ದೆಹಲಿ ಹಾಗೂ ಹರ್ಯಾಣಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದು, 15,000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. 
ನಾರಾಯಣ್ ದಾಸ್ ಗುಪ್ತ ಐಸಿಎಐ ನ ಮಾಜಿ ಅಧ್ಯಕ್ಷರಾಗಿದ್ದಾರೆ. ಜ.16 ರಂದು ರಾಜ್ಯಸಭೆಯ 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com