ಟಿಕೆಟ್ ಬುಕಿಂಗ್ ಮಾಡಲು ಆಧಾರ್ ಸಂಖ್ಯೆ ಕಡ್ಡಾಯ ಮಾದುವ ಯಾವುದೇ ಪ್ರಸ್ತಾಪವಿಲ್ಲ. ಆದಾಗ್ಯೂ, ಜನವರಿ 1, 2017ರಿಂದ ಹಿರಿಯ ನಾಗರಿಕರಿಗೆ ರಿಯಾಯಿತಿ ರೈಲ್ವೆ ಟಿಕೆಟ್ ಗಳನ್ನು ಬುಕ್ ಮಾಡಲು ಐಚ್ಚಿಕ ಆಧಾರದ ಮೇಲೆ ಆಧಾರ್ ಕಾರ್ಡ್ ಬಳಕೆಯನ್ನು ಪರಿಚಯಿಸಲಾಗಿದೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ರಾಜೆನ್ ಗೋಹೈನ್ ಸಂಸತ್ತಿನಲ್ಲಿ ಇಂದು ತಿಳಿಸಿದರು.