ಜಗತ್ ಪ್ರಸಿದ್ಧ ಪುರಿ ಜಗನ್ನಾಥ್ ದೇವಸ್ತಾನದ ಬಳಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರಜೆ ರಕ್ಷಣೆ; ದೆಹಲಿಗೆ ರವಾನೆ!

ಜಗತ್ ಪ್ರಸಿದ್ಧ ಪುರಿ ಜಗನ್ನಾಥ್ ದೇವಸ್ತಾನದ ಬಳಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರಜೆಯನ್ನು ಪುರಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ದೆಹಲಿಯ ರಷ್ಯಾ ರಾಯಭಾರಿ ಕಚೇರಿಗೆ...
ಆಂಡ್ರೇ ಗ್ಲಾಗೋಲೆವ್
ಆಂಡ್ರೇ ಗ್ಲಾಗೋಲೆವ್
ಪುರಿ: ಜಗತ್ ಪ್ರಸಿದ್ಧ ಪುರಿ ಜಗನ್ನಾಥ್ ದೇವಸ್ತಾನದ ಬಳಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರಜೆಯನ್ನು ಪುರಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ದೆಹಲಿಯ ರಷ್ಯಾ ರಾಯಭಾರಿ ಕಚೇರಿಗೆ ಕಳುಹಿಸಿದೆ. 
ರಷ್ಯಾ ಮೂಲದ 53 ವರ್ಷದ ಆಂಡ್ರೇ ಗ್ಲಾಗೋಲೆವ್ ಜಗನ್ನಾಥ ದೇವಸ್ತಾನದ ಬಳಿ ಭಿಕ್ಷೆ ಬೇಡುತ್ತಿದ್ದು ಇದನ್ನು ಗಮನಿಸಿದ ಪುರಿ ಜಿಲ್ಲಾಡಲಿತ ಡಿಸೆಂಬರ್ 11ರಂದು ಅವರನ್ನು ರಕ್ಷಿಸಿ ಅವರಿಗೆ ನಗರದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. 
ಗ್ಲಾಗೋಲೆವ್ ರಷ್ಯಾಗೆ ಹಿಂದಿರುಗಲು ಹಿಂಜರಿದಿದ್ದು ನಿರಾಶ್ರಿತರ ಸ್ಥಾನಮಾನದೊಂದಿಗೆ ಭಾರತದಲ್ಲೇ ಉಳಿಯಲು ಬಯಸಿದ್ದಾರೆ. ನಿನ್ನೆ ಪುರುಶೋತ್ತಮ್ ಎಕ್ಸ್ ಪ್ರೆಸ್ ನಲ್ಲಿ ನವದೆಹಲಿ ತೆರಳಿದರು. 
ಮೂಲಗಳ ಪ್ರಕಾರ, ಗ್ಲಾಗೋಲೆವ್ ರಷ್ಯಾದ ಬವಿ ಪ್ರದೇಶದಿಂದ ಭಾರತಕ್ಕೆ ಆಗಮಿಸಿದ್ದರು. ಸದ್ಯ ಅವರು ನಿರಾಶ್ರಿತರ ಸ್ಥಾನಕ್ಕಾಗಿ ದೆಹಲಿಯಲ್ಲಿನ ನಿರಾಶ್ರಿತರ ವಿಶ್ವಸಂಸ್ಥೆಯ ಹೈ ಕಮಿಷನ್ ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. 
2015ರಲ್ಲಿ ಗ್ಲಾಗೋಲೆವ್ ರಷ್ಯಾದಿಂದ ಭಾರತಕ್ಕೆ ಬಂದಿದ್ದರು. ಕಾರಣ ಭಗವಂತಾ ಶಿವನನ್ನು ಆರಾಧಿಸಲು ಪ್ರಾರಂಭಿಸಿದಾಗ ಕುಟುಂಬಸ್ಥರು ನನ್ನನ್ನು ಮನೆಯಿಂದ ಹೊರಹಾಕಿದ್ದರು ಎಂದು ಆಂಡ್ರೆ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com