ಭಗವದ್ಗೀತೆ ಪಠಿಸಿದ ಮುಸ್ಲಿಮ್ ವಿದ್ಯಾರ್ಥಿನಿ ವಿರುದ್ಧ ಫತ್ವಾ

ಶ್ರೀ ಕೃಷ್ಣನ ವೇಷ ಧರಿಸಿ ಭಗವದ್ಗೀತೆ ಪಠಣ ಮಾಡಿದ 15 ವರ್ಷದ ಮುಸ್ಲಿಮ್ ವಿದ್ಯಾರ್ಥಿನಿ ಅಲಿಯಾ ಖಾನ್ ವಿರುದ್ಧ ಇಸ್ಲಾಮಿಕ್....
ಅಲಿಯಾ ಖಾನ್
ಅಲಿಯಾ ಖಾನ್
ಲಖನೌ: ಶ್ರೀ ಕೃಷ್ಣನ ವೇಷ ಧರಿಸಿ ಭಗವದ್ಗೀತೆ ಪಠಣ ಮಾಡಿದ 15 ವರ್ಷದ ಮುಸ್ಲಿಮ್ ವಿದ್ಯಾರ್ಥಿನಿ ಅಲಿಯಾ ಖಾನ್ ವಿರುದ್ಧ ಇಸ್ಲಾಮಿಕ್ ಸಂಘಟನೆ ದಾರೂಲ್ ಉಲೂಮ್ ಫತ್ವಾ ಹೊರಡಿಸಿದೆ. 
ಇತ್ತೀಚಿಗೆ ತನ್ನ ಶಾಲೆಯಲ್ಲಿ ಹಿಂದೂ ಧರ್ಮದ ಭಗವದ್ಗೀತೆ ಪಠಿಸಿದ್ದಕ್ಕಾಗಿ ಅಲಿಯಾ ಖಾನ್ ವಿರುದ್ಧ ಜನವರಿ 2ರಂದು ದಾರೂಲ್ ಉಲೂಮ್ ಫತ್ವಾ ಹೊರಡಿಸಿದೆ.
ಈ ಕುರಿತು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಲಿಯಾ ಖಾನ್, ಸ್ಪರ್ಧೆಯೊಂದರಲ್ಲಿ ಕೃಷ್ಣನ ರೀತಿ ವೇಷ ಧರಿಸಿ ಭಗವದ್ಗೀತೆ ಪಠಿಸಿದ್ದಕ್ಕಾಗಿ ನನ್ನ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಇತ್ತೀಚಿಗೆ ಉತ್ತರ ಪ್ರದೇಶ ಸರ್ಕಾರ ಲಖೌನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಅಲಿಯಾ ಖಾನ್ ಅವರು ಭಗವದ್ಗೀತೆ ಪಠಣ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಬಹುಮಾನ ಪಡೆದಿದ್ದರು. ಪ್ರಶಸ್ತಿಯೊಂದಿಗೆ 25 ಸಾವಿರ ರುಪಾಯಿ ನಗದು ಬಹುಮಾನ ಪಡೆದಿದ್ದರು. ಆದರೆ ಈ ವಿದ್ಯಾರ್ಥಿನಿಯ ನಡೆ ಇಸ್ಲಾಮಿಕ್ ಗೆ ವಿರುದ್ಧವಾಗಿದೆ ಎಂದು ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com