ಅರುಣಾಚಲ ಪ್ರದೇಶದಲ್ಲಿ 600 ಮೀಟರ್ ರಸ್ತೆ ನಿರ್ಮಿಸಿದ ಚೀನಾ: ಮಾಜಿ ಸಂಸದ

ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮಾಡಿದೆ ಎಂಬ ವರದಿಗಳ ಬೆನ್ನಲ್ಲೇ ನೆರೆ ರಾಷ್ಟ್ರದ ಪ್ರಜೆಗಳ ಗುಂಪು ಅರುಣಾಚಲ ಪ್ರದೇಶಕ್ಕೆ ಸೇರಿರುವ ಜಾಗದಲ್ಲಿ 600 ಮೀಟರ್ ಗಳಿಗೂ ಹೆಚ್ಚಿನ ರಸ್ತೆ ನಿರ್ಮಾಣ...
ಚೀನಾ
ಚೀನಾ
ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮಾಡಿದೆ ಎಂಬ ವರದಿಗಳ ಬೆನ್ನಲ್ಲೇ ನೆರೆ ರಾಷ್ಟ್ರದ ಪ್ರಜೆಗಳ ಗುಂಪು ಅರುಣಾಚಲ ಪ್ರದೇಶಕ್ಕೆ ಸೇರಿರುವ ಜಾಗದಲ್ಲಿ 600 ಮೀಟರ್ ಗಳಿಗೂ ಹೆಚ್ಚಿನ ರಸ್ತೆ ನಿರ್ಮಾಣ ಮಾಡಿದೆ ಎಂದು ಮಾಜಿ ಸಂಸದ ಹಾಗೂ ಅರುಣಾಚಲ ಪ್ರದೇಶದ ಬಿಜೆಪಿ ಅಧ್ಯಕ್ಷ ತಾಪಿರ್ ಗೋವಾ ಹೇಳಿದ್ದಾರೆ. 
ಚೀನಾದ ನಿರ್ಮಾಣ ಸಂಸ್ಥೆಯೊಂದು ಅರುಣಾಚಲ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಿದೆ. ರಸ್ತೆ ಮಾಡಲಾಗುತ್ತಿದ್ದ ಪ್ರದೇಶದಲ್ಲಿ ಇಬ್ಬರು ಯುವಕರು ಚೀನಾದವರನ್ನು ಹಾಗೂ ರಸ್ತೆ ನಿರ್ಮಾಣಕ್ಕಾಗಿ ಬಳಕೆ ಮಾಡಲಾಗುತ್ತಿದ್ದ ವಸ್ತುಗಳನ್ನು ನೋಡಿದ್ದರು, ತಕ್ಷಣವೇ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. 
ಐಟಿಬಿಪಿ ಹಾಗೂ ಸೇನಾ ಸಿಬ್ಬಂದಿಗಳೊಂದಿಗೆ ಪೊಲೀಸರೂ ಆ ಪ್ರದೇಶಕ್ಕೆ ತೆರಳಿದ್ದರು. ಆದರೆ ಅಲ್ಲಿ ನಡೆಸಲಾಗುತ್ತಿದ್ದ ಕಾಮಗಾರಿಯ ವಾಹನಗಳ ಚಾಲಕರು ಇರಲಿಲ್ಲ, ಮಾಹಿತಿ ನೀಡಿದ ಯುವಕರು ವಾಹನಗಳನ್ನು ಜಖಂಗೊಳಿಸಿದರು ಎಂದು ಮಾಜಿ ಸಂಸದರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com