ಕುಲಾಂತರಿ ಸಾಸಿವೆ ವಾಣಿಜ್ಯ ಬಳಕೆ ವಿವಾದ ಜೆಇಎ ಸಮಿತಿಗೆ ಒಪ್ಪಿಸಿದ ಸರ್ಕಾರ

ಕುಲಾಂತರಿ ಸಾಸಿವೆ ಬಗ್ಗೆ ದೇಶದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕುಲಾಂತರಿ ಸಾಸಿವೆ ತಳಿಯನ್ನು ರೈತರಿಗೆ ನೀಡುವ ಬಗ್ಗೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಕುಲಾಂತರಿ ಸಾಸಿವೆ ಬಗ್ಗೆ ದೇಶದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕುಲಾಂತರಿ ಸಾಸಿವೆ ತಳಿಯನ್ನು ರೈತರಿಗೆ ನೀಡುವ ಬಗ್ಗೆ (ವಾಣಿಜ್ಯ ಬಳಕೆಗೆ ಬಿಡುಗಡೆ) ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಜೆನೆಟಿಕ್ ಎಂಜಿನಿಯರಿಂಗ್ ಅಪ್ರೇಸಲ್ ಸಮಿತಿಗೆ ಒಪ್ಪಿಸಿದೆ.
ಜೆಇಎ ಸಮಿತಿ ಮೇ 11,2017ರಂದು ನಡೆದ ತನ್ನ 133ನೇ ಸಭೆಯಲ್ಲಿ ಪರಿಸರ ಬಿಡುಗಡೆಗೆ ಶಿಫಾರಸು ಮಾಡಿದೆ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಮಹೇಶ್ ಶರ್ಮಾ ಅವರು ಇಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಪಾಲುದಾರ ಪ್ರತಿನಿಧಿಗಳಿಂದ ಹಲವು ಮನವಿಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಪ್ರಸ್ತಾವನೆಯನ್ನು ಮತ್ತೆ ಪರಿಶೀಲನೆಗಾಗಿ ಜೆಇಎ ಸಮಿತಿಗೆ ಕಳುಹಿಸಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕುಲಾಂತರಿ ಸಾಸಿವೆಯನ್ನು ನಿಷೇಧಿಸಬೇಕು. ನೈಸರ್ಗಿಕ ಸಾಸಿವೆಯಲ್ಲಿನ ಔಷಧೀಯ ಗುಣಗಳು ಇದರಲ್ಲಿ ಇಲ್ಲ ಎಂಬುದು ರೈತ ಸಂಘಟನೆಗಳ ಅಭಿಪ್ರಾಯ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com