ಲಾಲೂ ಪುತ್ರಿ ಮಿಸಾಭಾರ್ತಿ ವಿರುದ್ಧ ಮತ್ತೊಂದು ಚಾರ್ಜ್ ಶೀಟ್ ದಾಖಲಿಸಿದ ಇಡಿ

ಸಾರ್ವಜನಿಕ ಹಣ ದುರ್ಬಳಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾಭಾರ್ತಿ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ಮತ್ತೊಂದು ಆರೋಪಪಟ್ಟಿ ದಾಖಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸಾರ್ವಜನಿಕ ಹಣ ದುರ್ಬಳಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾಭಾರ್ತಿ ವಿರುದ್ಧ ಜಾರಿ  ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ಮತ್ತೊಂದು ಆರೋಪಪಟ್ಟಿ ದಾಖಲಿಸಿದ್ದಾರೆ.
ಮಿಸ್‌ ಮಿಶೈಲ್‌ ಪ್ಯಾಕರ್ಸ್‌ ಹಾಗೂ ಪ್ರಿಂಟರ್ಸ್‌ ಪ್ರೈ.ಲಿ ಹೆಸರಿನಲ್ಲಿ ಇರುವ ಫಾರ್ಮ್‌ ಹೌಸ್‌ ಭಾರ್ತಿ ಹಾಗೂ ಕುಮಾರ್‌ಗೆ ಸೇರಿದ್ದೆಂದು ಜಾರಿ ನಿರ್ದೇಶನಾಲಯ ಆರೋಪ ಪಟ್ಟಿಯಲ್ಲಿ ತಿಳಿಸಿದ್ದು, 2008-09ರ ಸಾಲಿನಲ್ಲಿ ಸುಮಾರು  1.2 ಕೋಟಿ ರುಗಳಷ್ಟು ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡು ಈ ಸಂಸ್ಥೆ ಖರೀದಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಇನ್ನು ಇದೇ ಪ್ರಕರಣ ಸಂಬಂಧ ಈ ಹಿಂದೆಯೇ ಅಂದರೆ ಡಿಸೆಂಬರ್‌ 23ರಂದು ಮೊದಲ  ಆರೋಪಪಟ್ಟಿ ಸಿದ್ಧಪಡಿಸಲಾಗಿತ್ತು. ಈ ವೇಳೆ ದೆಹಲಿಯಲ್ಲಿರುವ ಮಿಸಾ ಭಾರ್ತಿ ಕುಟುಂಬದ ಫಾರ್ಮ್‌‌ ಹೌಸ್‌ ಅನ್ನೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದ್ದು, ಮಿಸಾ ಭಾರ್ತಿ ಹಾಗೂ ಆಕೆಯ ಪತಿ ಶೈಲೇಶ್‌ ಕುಮಾರ್‌ ವಿರುದ್ಧ  ತನಿಖೆಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಇದೀಗ ಮತ್ತೆ ಇಡಿ ಆಧಿಕಾರಿಗಳು ಮಿಸಾಭಾರ್ತಿ ವಿರುದ್ಧ ಜಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಫೆಬ್ರವರಿ 5ರಂದು ಈ ಪ್ರಕರಣದ ವಿಚಾರಣೆಯನ್ನು ದೆಹಲಿಯ ಪಾಟಿಯಾಲಾ ಕೋರ್ಟ್ ವಿಚಾರಣೆ ನಡೆಸಲಿದೆ.
8 ಸಾವಿರ ಕೋಟಿ ರು. ಹವಾಲ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜುಲೈ ತಿಂಗಳಿನಲ್ಲಿ ಮಿಸಾಭಾರ್ತಿ ಅವರ ನಿವಾಸ, ಕಚೇರಿ ಸೇರಿದಂತೆ ಹಲವಾರು ಕಡೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಸುರೇಂದ್ರ ಕುಮಾರ್‌  ಹಾಗೂ ವೀರೇಂದ್ರ ಜೈನ್‌ ಎಂಬ ಇಬ್ಬರನ್ನು ಬಂಧಿಸಿತ್ತು. ಬಂಧಿತರು ಶೆಲ್‌ ಸಂಸ್ಥೆಗಳ (ನಾಮ್ ಕೇ ವಾಸ್ತೆ ಸಂಸ್ಥೆಗಳು) ಮೂಲಕ ಭಾರೀ ಪ್ರಮಾಣದಲ್ಲಿ ಅಕ್ರಮ ಹಣದ ವ್ಯವಹಾರದಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com