ಅರುಣ್ ಜೇಟ್ಲಿ
ದೇಶ
ರಾಜಕೀಯ ನಿಧಿಯ ಶುದ್ದಿಕರಣ ಪ್ರಸ್ತಾಪಗಳಿಗೆ ಸರ್ಕಾರ ಮುಕ್ತವಾಗಿದೆ: ಅರುಣ್ ಜೇಟ್ಲಿ
ರಾಜಕೀಯ ಪಕ್ಷಗಳ ನಿಧಿಯನ್ನು ಇನ್ನಷ್ಟು ಶುದ್ದ ಹಾಗೂ ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂಡು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನವದೆಹಲಿ: ರಾಜಕೀಯ ಪಕ್ಷಗಳ ನಿಧಿಯನ್ನು ಇನ್ನಷ್ಟು ಶುದ್ದ ಹಾಗೂ ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂಡು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ರಾಜಕೀಯ ವ್ಯವಸ್ಥೆಯಲ್ಲಿ ಧನಸಹಾಯ ಮಾಡುವ ಸಾಂಪ್ರದಾಯಿಕ ಅಭ್ಯಾಸವು ದೇಣಿಗೆಗಳನ್ನು ತೆಗೆದುಕೊಳ್ಳುವುದು ಮತ್ತು ಖರ್ಚುಗಳನ್ನು ನಡೆಸುವುದು ಎಂದಾಗಿದೆ ಫೇಸ್ ಬುಕ್ ಪೋಸ್ಟ್ ನಲ್ಲಿ ಅರುಣ್ ಜೇಟ್ಲಿ ಹೇಳಿದ್ದಾರೆ. ಬಹುತೇಕ ಹಣದ ಆಗಮನವು ಅನಾಮಧೇಯ ಮೂಲಗಳಿಂದ ಬಂದ ಬಂದದ್ದಾಗಿದೆ. ರಾಜಕೀಯ ಪಕ್ಷಗಳು ಹಣದ ಪ್ರಮಾಣವನ್ನು ಎಂದಿಗೂ ಬಹಿರಂಗಪಡಿಸುವುದಿಲ್ಲ. ಈ ವ್ಯವಸ್ಥೆಯು ಕಪ್ಪು ಹಣದ ಇರುವಿಕೆಯನ್ನು ಸಾಬೀತುಪಡಿಸುತ್ತದೆ.
"ಇದು ಸಂಪೂರ್ಣವಾಗಿ ಅಪಾರದರ್ಶಕ ವ್ಯವಸ್ಥೆಯಾಗಿದ್ದು, ಹೆಚ್ಚಿನ ರಾಜಕೀಯ ಸಮೂಹಗಳು ಪ್ರಸ್ತುತ ವ್ಯವಸ್ಥೆಯನ್ನೇ ಬಳಸಿಕೊಲ್ಳಲು ಬಯಸುತ್ತವೆ ಮತ್ತು ಇದನ್ನು ಬದಲಿಸಲು ಸಹಮತ ಸೂಚಿಸುವುದಿಲ್ಲ. ಆದ್ದರಿಂದ ರಾಜಕೀಯ ಪಕ್ಷದ ನಿಧಿಯನ್ನು ಪಾರದರ್ಶಕವಾಗಿಸಲು ಯಾವುದೇ ಹೊಸ ಕ್ರಮ ಜಾರಿಗೆ ತರುವ ಪ್ರಯತ್ನವಾಗಬೇಕು.
ಕಳೆದ ವಾರ ಚುನಾವಣಾ ಬಾಂಡ್ ಗಳ ವ್ಯಾಪ್ತಿಗಳನ್ನು ಘೋಷಿಸಿದ್ದ ಜೇಟ್ಲಿ, ದೇಶದ ದೊದ್ಡ ಸಾಲದಾತ ಬ್ಯಾಂಕ್ ಎಸ್ ಬಿಐ ನಿಂದ ಮಾರಾಟಕ್ಕಿದ್ದು ಕೇವಲ 15 ದಿನಗಳ ಅವಧಿಯನ್ನು ಹೊಂದಿರುತ್ತದೆ ಇದೇ ವೇಳೆ ರಾಜಕೀಯ ಪಕ್ಷಗಳಿಗೆ ಹಣದ ಬದಲಾಗಿ ಬಾಂಡ್ ಗಳನ್ನು ನೀಡುವ ವ್ಯವಸ್ಥೆ ಇದಾಗುತ್ತದೆ.
"ಎಲ್ಲಾ ಮೂರು ವಿಧಾನಗಳು ಶುದ್ದ ಹಣವನ್ನು ಒಳಗೊಂಡಿರುತ್ತವೆ, ಮೊದಲ ಎರಡು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತವೆ ಮತ್ತು ಚುನಾವಣಾ ಬಾಂಡ್ ಗಳು ಪ್ರಸ್ತುತ ಪಾರದರ್ಶಕತೆಯ ವ್ಯವಸ್ಥೆಯ ಮೇಲೆ ಗಣನೀಯ ಸುಧಾರಣೆ ತರಲಿದೆ. ಭಾರತದ ರಾಜಕೀಯ ನಿಧಿಯ ಶುದ್ಧೀಕರಣವನ್ನು ಮತ್ತಷ್ಟು ಖಚಿತಪಡಿಸಲು ಎಲ್ಲ ಬಗೆಯ ಸಲಹೆಗಳನ್ನು ಪರಿಗಣಿಸಲು ಸರ್ಕಾರ ಸಿದ್ಧವಾಗಿದೆ. ರಾಜಕೀಯ ಪಕ್ಷಗಳ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದ ಹಣ ವ್ಯವವಾಗುತ್ತದೆ. ಈ ವೆಚ್ಚಗಳು ನೂರಾರು ಕೋಟಿ ರೂಪಾಯಿತು. ಆದರೂ ರಾಜಕೀಯ ವ್ಯವಸ್ಥೆಯ ಪಾರದರ್ಶಕ ನಿಧಿಯ ವ್ಯವಸ್ಥೆಯನ್ನು ಹೊಂದಿಲ್ಲ." ಅರುಣ್ ಜೇಟ್ಲಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ