ಪ್ರಧಾನಮಂತ್ರಿ ನರೇಂದ್ರ ಮೋದಿ
ದೇಶ
ಪ್ರಧಾನಿ ಮೋದಿ ಭಾವಚಿತ್ರ ಹಾಕಲು ಉತ್ತರಾಖಂಡ್ ಮದರಸಾಗಳು ನಿರಾಕರಿಸಿಲ್ಲ: ಮಂಡಳಿ ಸ್ಪಷ್ಟನೆ
ಮದರಸಾಗಳ ಆವರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಿಚಿತ್ರ ಹಾಕಲು ನಿರಾಕರಿಸಿಲ್ಲ ಎಂದು ಉತ್ತರಾಖಾಂಡ್ ಮದರಸಾ ಶಿಕ್ಷಣ ಮಂಡಳಿ ಭಾನುವಾರ ಸ್ಪಷ್ಟನೆ ನೀಡಿದೆ...
ಡೆಹ್ರಾಡೂನ್: ಮದರಸಾಗಳ ಆವರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಿಚಿತ್ರ ಹಾಕಲು ನಿರಾಕರಿಸಿಲ್ಲ ಎಂದು ಉತ್ತರಾಖಾಂಡ್ ಮದರಸಾ ಶಿಕ್ಷಣ ಮಂಡಳಿ ಭಾನುವಾರ ಸ್ಪಷ್ಟನೆ ನೀಡಿದೆ.
ಉತ್ತರಾಖಂಡ್'ನ ಡೆಹ್ರಾಡೂನ್ ನಲ್ಲಿರುವ ಮದರಸಾಗಳ ಆವರಣದಲ್ಲಿ ಪ್ರಧಾನಿ ಮೋದಿಯವರ ಭಾವಿಚಿತ್ರ ಹಾಕುವಂತೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಲವು ಮದರಸಾಗಳು ನಿರಾಕರಿಸಿದ್ದು, ಧಾರ್ಮಿಕ ಅಂಶಗಳ ಆಧಾರದ ಮೇಲೆ ಮದರಸಾ ನಿಯಂತ್ರಣ ಮಂಡಳಿ ಈ ನಿರ್ಧಾರ ಕೈಗೊಂಡಿದೆ ಎಂದು ಈ ಹಿಂದೆ ಹೇಳಲಾಗಿತ್ತು.
ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಉತ್ತರಾಖಂಡ್ ಮದರಸಾ ಶಿಕ್ಷಣ ಮಂಡಳಿಯ ಉಪ ನೋಂದಾವಣಾಧಿಕಾರಿ ಅಖ್ಲಾಕ್ ಅಹ್ಮದ್ ಅನ್ಸಾರಿಯವರು, ಜೀವಂತವಾಗಿರುವ ವ್ಯಕ್ತಿಯ ಭಾವಚಿತ್ರವನ್ನು ಪ್ರಾರ್ಥನಾ ಮಂದಿರದಲ್ಲಿ ಹಾಕಬಾರದು ಎಂದು ಇಸ್ಲಾಂನಲ್ಲಿ ತಿಳಿಸಲಾಗಿದೆ. ಪ್ರಾರ್ಥನಾ ಮಂದಿರ ಬಿಟ್ಟು ಪ್ರಧಾನಮಂತ್ರಿಗಳ ಫೋಟೋವನ್ನು ಎಲ್ಲಿ ಬೇಕಾದರೂ ಹಾಕಬಹುದು. ಇದರಲ್ಲಿ ಮದರಸಾಗಳಿಗೇಕೆ ಸಮಸ್ಯೆಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
2017ರ ಸ್ವಾತಂತ್ರ್ಯ ದಿನಾಚರಣೆಯಂದು ಸರ್ಕಾರ ಮದರಸಾಗಳಿಗೆ ಕೆಲ ನಿರ್ದೇಶನಗಳನ್ನು ನೀಡಿತ್ತು. ಮನಮೋಹನ್ ಸಿಂಗ್ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ 2022ರ ಹೊತ್ತಿಗೆ ನವ ಭಾರತ ನಿರ್ಮಾಣ ಮಾಡುವ ಪ್ರತಿಜ್ಞೆಗೆ ಬೆಂಬಲ ನೀಡಬೇಕೆಂದು ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು. ಅಲ್ಲದೆ. ಇದರೊಂದಿಗೆ ಶಾಲೆಗಳ ಪ್ರಗತಿ ವರದಿಯನ್ನು ನೀಡುವಂತೆಯೂ ಸೂಚಿಸಿತ್ತು. ಆದೇಶವನ್ನು ಉತ್ತರಾಖಂಡ್ ಅಲ್ಪಸಂಖ್ಯಾತ ನಿರ್ದೇಶನಾಲಯ ಪಾಲನೆ ಮಾಡಬೇಕಿದ್ದು, ಎಲ್ಲಾ ಮದರಸಾಗಳಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಹಾಕುವಂತೆ ತಿಳಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ