ಕರ್ನಾಟಕ ಇನ್ನೂ 81 ಟಿಎಂಸಿ ನೀರು ಬಿಡಬೇಕಾಗಿದೆ: ತಮಿಳುನಾಡು ಸಿಎಂ ಪಳನಿಸ್ವಾಮಿ

ಕರ್ನಾಟಕ ಇದುವರೆಗೆ 111 ಟಿಎಂಸಿ ಕಾವೇರಿ ನೀರು ಬಿಟ್ಟಿದ್ದು, ಇನ್ನೂ 81 ಟಿಎಂಸಿ ನೀರು ಬಿಡಬೇಕಾಗಿದೆ ಎಂದು ತಮಿಳುನಾಡು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ಕರ್ನಾಟಕ ಇದುವರೆಗೆ 111 ಟಿಎಂಸಿ ಕಾವೇರಿ ನೀರು ಬಿಟ್ಟಿದ್ದು, ಇನ್ನೂ 81 ಟಿಎಂಸಿ ನೀರು ಬಿಡಬೇಕಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಬುಧವಾರ ವಿಧಾನಸಭೆಗೆ ತಿಳಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ 2007ರ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಕುರಿತು ಮಾತನಾಡಿದ ಪಳನಿಸ್ವಾಮಿ, ತಮಿಳನಾಡಿಗೆ ಸೇರಬೇಕಾದ ಒಟ್ಟು 192 ಟಿಎಂಸಿ ನೀರಿನ ಪೈಕಿ ಕರ್ನಾಟಕ ಈಗಾಗಲೇ 111 ಟಿಎಂಸಿ ನೀರು ಹರಿಸಿದೆ. ಬಾಕಿ ಇರುವ 81 ಟಿಎಂಸಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದರು.
ಬಾಳಿ ಉಳಿದಿರುವ 81 ಟಿಎಂಸಿ ನೀರನ್ನು ಕರ್ನಾಟಕ ಮೇ 2018ರೊಳಗೆ ಹರಿಸುವ ವಿಶ್ವಾಸವಿದೆ ಎಂದು ಡಿಎಂಕೆ ಶಾಸಕ ದುರೈ ಚಂದ್ರಶೇಖರ್ ಅವರ ಪ್ರಶ್ನೆಗೆ ಸಿಎಂ ಪಳನಿಸ್ವಾಮಿ ಉತ್ತರಿಸಿದರು.
ನಿನ್ನೆಯಷ್ಟೇ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಗ್ಗಂಟಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಾಲ್ಕು ವಾರದಲ್ಲಿ ತೀರ್ಪು ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿರುವುದನ್ನು ಸಹ ಪಳನಿಸ್ವಾಮಿ ಇಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com