ಧಾರ್ಮಿಕ ಚಿಹ್ನೆ ಇರುವ ನಾಣ್ಯ ರದ್ದುಗೊಳಿಸಲು ಕೇಳಿದ್ದ ಅರ್ಜಿ ವಜಾ!

ಧಾರ್ಮಿಕ ಚಿಹ್ನೆಗಳಿರುವ ನಾಣ್ಯಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಧಾರ್ಮಿಕ ಚಿಹ್ನೆ ಇರುವ ನಾಣ್ಯ ರದ್ದುಗೊಳಿಸಲು ಕೇಳಿದ್ದ ಅರ್ಜಿ ವಜಾ!
ಧಾರ್ಮಿಕ ಚಿಹ್ನೆ ಇರುವ ನಾಣ್ಯ ರದ್ದುಗೊಳಿಸಲು ಕೇಳಿದ್ದ ಅರ್ಜಿ ವಜಾ!
ನವದೆಹಲಿ: ಧಾರ್ಮಿಕ ಚಿಹ್ನೆಗಳಿರುವ ನಾಣ್ಯಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ನಾಣ್ಯಗಳ ಮೇಲೆ ಧಾರ್ಮಿಕ ಚಿಹ್ನೆಗಳು ದೇಶದ ಜಾತ್ಯಾತೀತತೆಯನ್ನು ಭಂಗಗೊಳಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ.  ಅರ್ಜಿ ವಿಚಾರಣೆ ನಡೆಸಿರುವ ಹಂಗಾಮಿ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾ.ಸಿ ಹರಿ ಶಂಕರ್, ಅರ್ಜಿಯನ್ನು ವಜಾಗೊಳಿಸಿದ್ದಾರೆ. 
5 ರೂಪಾಯಿ ನಾಣ್ಯಗಳಲ್ಲು ಮಾತಾ ವೈಷ್ಣೋದೇವಿಯ ಚಿಹ್ನೆ ಹಾಕಲಾಗಿರುವ್ಚುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿಯ ವಿಚಾರಾಣೆ ನಡೆಸಿರುವ ನ್ಯಾಯಾಲಯ ನಾಣ್ಯಗಳಮೇಲೆ ಧಾರ್ಮಿಕ ಚಿಹ್ನೆಗಳನ್ನು ಮುದ್ರಿಸುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಕೋರ್ಟ್ ಹೇಳಿದೆ. 
ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿಯ ರತಜ ಮಹೋತ್ಸವದ ನೆನಪಿಗಾಗಿ ದೇಶದಲ್ಲಿ 5 ರೂ ನಾಣ್ಯದ ಮೇಲೆ ವೈಷ್ಣೋದೇವಿ ಚಿತ್ರವನ್ನು ಮುದ್ರಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com