ಎಂಟನೇ ದಿನಕ್ಕೆ ಕಾಲಿಟ್ಟ ತಮಿಳು ನಾಡು ಬಸ್ ಮುಷ್ಕರ

ತಮಿಳುನಾಡಿನಲ್ಲಿ ಬಸ್ ಮುಷ್ಕರ ಸತತ ಎಂಟು ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ....
ತಾತ್ಕಾಲಿಕ ಚಾಲಕರನ್ನು ಕರೆದು ಸೇವೆ ಆರಂಭಿಸಿದರೂ ಕೂಡ ತಮಿಳು ನಾಡಿನಲ್ಲಿ ವಿರಳವಾಗಿ ಸಂಚರಿಸುತ್ತಿರುವ ಬಸ್ಸುಗಳು
ತಾತ್ಕಾಲಿಕ ಚಾಲಕರನ್ನು ಕರೆದು ಸೇವೆ ಆರಂಭಿಸಿದರೂ ಕೂಡ ತಮಿಳು ನಾಡಿನಲ್ಲಿ ವಿರಳವಾಗಿ ಸಂಚರಿಸುತ್ತಿರುವ ಬಸ್ಸುಗಳು
ಕೊಯಂಬತ್ತೂರು: ತಮಿಳುನಾಡಿನಲ್ಲಿ ಬಸ್ ಮುಷ್ಕರ ಸತತ ಎಂಟು ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ಇಲಾಖೆ ತರಬೇತಿ ಹೊಂದಿಲ್ಲದ ಚಾಲಕರನ್ನು ಸೇವೆಗೆ ಕರೆಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 4ರಂದು ಸಾರಿಗೆ ಒಕ್ಕೂಟಗಳು ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದವು. ಇಂತಹ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸಂಚಾರಕ್ಕೆ ಅನನುಕೂಲವಾಗಬಾರದೆಂದು ಇಲಾಖೆ ತರಬೇತಿ ಹೊಂದಿಲ್ಲದ ಚಾಲಕರನ್ನು ಸೇವೆಗೆ ಕರೆಸಿಕೊಂಡಿದೆ.
ಇದಕ್ಕೂ ಹಿಂದೆ ಇಂತಹ ಮುಷ್ಕರ ಸಮಯದಲ್ಲಿ ತಾತ್ಕಾಲಿಕ ಸೇವೆಯ ಚಾಲಕರನ್ನು ಇಲಾಖೆ ಕರೆಸಿಕೊಂಡಿತ್ತು. ಆದರೆ ಎಂದಿನ ಸಂಖ್ಯೆಯಲ್ಲಿ ಬಸ್ಸುಗಳು ಸಂಚಾರವಾಗುತ್ತಿರಲಿಲ್ಲ. ಈ ಬಾರಿಯೂ ಅದೇ ರೀತಿ ತಾತ್ಕಾಲಿಕ ಸೇವೆಯ ಚಾಲಕರನ್ನು ನೇಮಿಸಲಾಗಿದೆ.
ಈ ಮಧ್ಯೆ ಮುಷ್ಕರ ನಡೆಯುತ್ತಿರುವಾಗ ಶಾಸಕರ ಸಂಚಾರಕ್ಕೆ ವಿಶೇಷ ಬಸ್ಸುಗಳ ಸೇವೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ನೌಕರರೊಂದಿಗೆ ಮಾತುಕತೆ ನಡೆಸಿ ಮುಷ್ಕರವನ್ನು ಹಿಂಪಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎ.ಕೆ.ಪಳನಿಸಾಮಿ ಅವರಿಗೆ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಒತ್ತಾಯಿಸಿದ್ದಾರೆ.
ಮುಷ್ಕರದ ಮೂರನೇ ದಿನ ಸಾರಿಗೆ ಸಚಿವ ಎಂ.ಆರ್. ವಿಜಯಭಾಸ್ಕರ್ ಸಾರಿಗೆ ಇಲಾಖೆ ನೌಕರರಿಗೆ ಮನವಿ ಮಾಡಿ ಕೆಲಸಕ್ಕೆ ಹಿಂತಿರುಗುವಂತೆ ಮನವಿ ಮಾಡಿದ್ದರು.
ವೇತನ ಪರಿಷ್ಕರಣೆ ಮತ್ತು ಬಾಕಿ ವೇತನ ಪಾವತಿಯಲ್ಲಿ ವೈಫಲ್ಯವನ್ನು ಖಂಡಿಸಿ ಸಾರಿಗೆ ಇಲಾಖೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ತಿಂಗಳಿಗೆ 30 ಸಾವಿರ ರೂಪಾಯಿ ವೇತನ ನೀಡಬೇಕೆಂದು ಸಾರಿಗೆ ನೌಕರರು ಒತ್ತಾಯಿಸುತ್ತಿದ್ದಾರೆ. ಆದರೆ ಅಧಿಕಾರಿಗಳು 24,400 ರೂಪಾಯಿ ತಿಂಗಳಿಗೆ ವೇತನ ನೀಡಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com