ನವದೆಹಲಿ: ದೇಶ ವಿಭಜನೆ ನಂತರ ಪಾಕಿಸ್ತಾನ ಅಥವಾ ಚೀನಾಕ್ಕೆ ತೆರಳಿ ಅಲ್ಲಿನ ಪೌರತ್ವ ಪಡೆದಿರುವವರ ಭಾರತದಲ್ಲಿನ ಆಸ್ತಿ 'ಶತ್ರು ಆಸ್ತಿ'ಯನ್ನು ಹರಾಜು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಭಾರತದಲ್ಲಿ ಶತ್ರು ಆಸ್ತಿ ಅಂದಾಜು 9,400 ಕೋಟಿ ರುಪಾಯಿದ್ದು ಇದರಿಂದ 1 ಲಕ್ಷ ಕೋಟಿ ರುಪಾಯಿ ಆದಾಯವನ್ನು ಸರ್ಕಾರ ನಿರೀಕ್ಷಿಸಿದೆ. ಶತ್ರು ಆಸ್ತಿ ಕಾಯ್ದೆ(ತಿದ್ದುಪಡಿ ಮತ್ತು ಅಂದಾಜು ಮೌಲ್ಯ ನಿಗದಿ) ತಿದ್ದುಪಡಿ ತಂದ ನಂತರದಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
49 ವರ್ಷಗಳ ಹಿಂದೆ ದೇಶ ತೊರೆದಿರುವವರ 6,289 ಆಸ್ತಿಗಳನ್ನು ಗುರುತಿಸಲಾಗಿದೆ. ಇತರ ಪ್ರಾತಿನಿಧಿಕ ಮೇಲ್ವಿಚಾರಣೆಯಲ್ಲಿರುವ 2,991 ಶತ್ರು ಆಸ್ತಿಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಗೃಹ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.