ಸೇನಾ ದಿನಾಚರಣೆ ಕಾರ್ಯಕ್ರಮ
ಸೇನಾ ದಿನಾಚರಣೆ ಕಾರ್ಯಕ್ರಮ

70ನೇ ಸೇನಾ ದಿನಾಚರಣೆ: ಭಾರತೀಯ ಸೇನೆಗೆ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಶುಭ ಹಾರೈಕೆ

70ನೇ ಸೇನಾ ದಿನಾಚರಣೆಯ ನಿಮಿತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಶುಭ ಕೋರಿದ್ದಾರೆ.
ನವದೆಹಲಿ: 70ನೇ ಸೇನಾ ದಿನಾಚರಣೆಯ ನಿಮಿತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಶುಭ ಕೋರಿದ್ದಾರೆ.
ಸೋಮವಾರ ಟ್ವಿಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರಕುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ದೇಶದ ರಕ್ಷಣೆಗಾಗಿ ಗಡಿಯಲ್ಲಿ ನಿಂತು ಕಾಯುತ್ತಿರುವ ಮಹಿಳಾ ಮತ್ತು ಪುರುಷ ಸೈನಿಕರಿಗೆ ನನ್ನ ಸಲ್ಯೂಟ್...ಹುತಾತ್ಮ  ಯೋಧರ ಸೇವೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ.. ಅವರ ಕುಟುಂಬಸ್ಖರ ನೋವು-ನಲಿವುಗಳೊಂದಿಗೆ ದೇಶವಿದ್ದು, ದೇಶದ ಸೈನಿಕ ಸಮವಸ್ತ್ರ ಧರಿಸಿದ ಪ್ರತಿಯೊಬ್ಬ ಯೋಧನೂ ದೇಶದ ಗೌರವ...ನಮ್ಮ ಸ್ವಾತಂತ್ರ್ಯದ  ಹಿಂದಿರುವ ಶಕ್ತಿ ನೀವು.. ದೇಶದ ನಾಗರಿಕರು ಇಂದು ಸುಖವಾಗಿ ನಿದ್ರಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನೀವು ಗಡಿಯಲ್ಲಿ ನಿದ್ರೆ ಬಿಟ್ಟು ಗಡಿ ಕಾಯುತ್ತಿರುವುದು. ನಿಮ್ಮ ಸೇವೆಗೊಂದು ಸಲಾಂ ಎಂದು ಕೋವಿಂದ್ ಟ್ವೀಟ್  ಮಾಡಿದ್ದಾರೆ.
ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸೇನಾ ದಿನಾಚರಣೆ ನಿಮಿತ್ತ ಭಾರತೀಯ ಸೈನಿಕರಿಗೆ ಶುಭ ಹಾರೈಕೆ ಮಾಡಿದ್ದು, ಭಾರತ ದೇಶದ ಪ್ರತಿಯೊಬ್ಬ ನಾಗರಿಕನೂ ಕೂಡ ಗೌರವಿಸಲೇ ಬೇಕಾದ ವ್ಯಕ್ತಿಗಳೆಂದರೆ  ಅದು ಸೈನಿಕರು..ದೇಶದ ಆಸ್ತಿ ಮತ್ತು ಗೌರವ ನಮ್ಮ ಯೋಧರು..ದೇಶದಲ್ಲಿ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಎಲ್ಲರಿಗಿಂತ ಮೊದಲು ಸಾವಿಗೂ ಅಂಜದೇ ರಕ್ಷಣಾ ಕಾರ್ಯದಲ್ಲಿ ಸೈನಿಕರು ತೊಡಗುತ್ತಾರೆ. ಇಂತಹ  ಸೈನಿಕರ ಸೇವೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯವರ್ಧನ್ ಸಿಂಗ್ ರಾಥೋಡ್, ಸ್ಮೃತಿ ಇರಾನಿ ಅವರು ಕೂಡ ಟ್ವೀಟ್ ಮೂಲಕ ಸೈನಿಕರಿಗೆ ಶುಭ ಹಾರೈಸಿದ್ದಾರೆ. ಅಂತೆಯೇ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಕೂಡ ಸೇನಾ ದಿನಾಚರಣೆ ನಿಮಿತ್ತ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com