ಕಾನ್ಪುರ: ಬೀಗ ಹಾಕಿದ್ದ ಮನೆಯಲ್ಲಿ ಕೈ ಹಾಕಿದಲ್ಲೆಲ್ಲಾ ರಾಶಿ-ರಾಶಿ ದುಡ್ಡಿನ ಕಂತೆಗಳು!

ಬೀಗ ಹಾಕಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ ಕೈಹಾಕಿದ ಜಾಗದಲ್ಲೆಲ್ಲಾ ಕೋಟಿ ಕೋಟಿ ಹಣ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬುಧವಾರ ನಡೆದಿದೆ.
ದಾಳಿ ವೇಳೆ ಸಿಕ್ಕ ನಿಷೇಧಿತ ನೋಟುಗಳು
ದಾಳಿ ವೇಳೆ ಸಿಕ್ಕ ನಿಷೇಧಿತ ನೋಟುಗಳು
ಕಾನ್ಪುರ: ಬೀಗ ಹಾಕಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ ಕೈಹಾಕಿದ ಜಾಗದಲ್ಲೆಲ್ಲಾ ಕೋಟಿ ಕೋಟಿ ಹಣ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬುಧವಾರ ನಡೆದಿದೆ.
ರಾಷ್ಟ್ರೀಯ ತನಿಖಾ ದಳ ಹಾಗೂ ಪೊಲೀಸರು ನಡೆಸಿದ ಜಂಟಿ ದಾಳಿಯಲ್ಲಿ ಸುಮಾರು 100 ಕೋಟಿಗೂ ಅಧಿಕ ಮೌಲ್ಯದ ನಿಷೇಧಿತ ನೋಟುಗಳನ್ನು ಕಾನ್ಪುರದ ಮನೆಯೊಂದರಲ್ಲಿ ಪತ್ತೆಹಚ್ಚಲಾಗಿದೆ. ಇನ್ಸ್​ಪೆಕ್ಟರ್​ ಜನರಲ್​  ಅಲೋಕ್​ ಸಿಂಗ್​ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಖಚಿತ ಮಾಹಿತಿ ಆಧಾರಿಸಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.  ಸುಮಾರು ದಿನಗಳಿಂದ ಬೀಗ ಹಾಕಲಾಗಿದ್ದ ಮನೆಯೊಂದರಲ್ಲಿ ಇಷ್ಟು ದೊಡ್ಡ ಮೊತ್ತದ ನಿಷೇಧಿತ  ನೋಟುಗಳು ಪತ್ತೆಯಾಗಿದ್ದು, ಈ ಸಂಬಂಧ ಅಧಿಕಾರಿಗಳು ಓರ್ವ ವ್ಯಕ್ತಿಯನ್ನು ಕೂಡ ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಹಳೆಯ ನಿಷೇಧಿತ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಡುವುದಾಗಿ  ಬಂಧಿತ ವ್ಯಕ್ತಿ ಭರವಸೆ ನೀಡಿದ್ದನಂತೆ. 
ಇದೇ ಕಾರಣಕ್ಕೆ ಹಲವು ಪ್ರಭಾವಿಗಳು ಈತನಿಗೆ ಹಳೆಯ ನೋಟುಗಳನ್ನು ನೀಡಿದ್ದರು ಎನ್ನಲಾಗಿದೆ. ಪ್ರಸ್ತುತ ತನಿಖಾ ದೃಷ್ಟಿಯಿಂದ ಆತನ ಹೆಸರನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಇನ್ನು ಪ್ರಸ್ತುತ  ದೊರೆತಿರುವ ಹಣದ ಮೌಲ್ಯ ಅಂದಾಜು 100 ಕೋಟಿ ರು. ಎಂದು ಶಂಕಿಸಲಾಗಿದ್ದು, ರಿಸರ್ವ್​ ಬ್ಯಾಂಕ್​ ಹಾಗೂ ಆದಾಯ ತೆರಿಗೆ ಇಲಾಖೆಯ ತಂಡ ಈ ಬಗ್ಗೆ ಖಚಿತ ಮಾಹಿತಿ ನೀಡಲಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.
ನಿಷೇಧಿತ ನೋಟುಗಳ ಜಾಲದ ಹಿಂದೆ ಸರ್ಕಾರಿ ನೌಕರರು ಭಾಗಿಯಾಗಿರುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಮೂಲಗಳು ಮಾಹಿತಿ ನೀಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com