ತೊಗಾಡಿಯಾಗೆ ಝೆಡ್ ಪ್ಲಸ್ ಭದ್ರತೆ ಇದೆ, ಎನ್ ಕೌಂಟರ್ ಅಸಾಧ್ಯ: ಆರೋಪ ತಳ್ಳಿಹಾಕಿದ ಪೊಲೀಸರು

ವಿಹೆಚ್'ಪಿ ನಾಯಕ ಪ್ರವೀಣ್ ತೊಡಾಗಿಯಾ ಅವರು 'ಝೆಡ್ ಪ್ಲಸ್' ಭದ್ರತೆಯನ್ನು ಹೊಂದಿದ್ದು, ಎನ್ ಕೌಂಟರ್ ನಡೆಸುವುದು ಅಸಾಧ್ಯ ಎಂದು ಅಹಮದಾಬಾದ್ ಪೊಲೀಸರು ಬುಧವಾರ ಸ್ಪಷ್ಟನೆ ನೀಡಿದ್ದಾರೆ...
ವಿಹೆಚ್'ಪಿ ನಾಯಕ ಪ್ರವೀಣ್ ತೊಡಾಗಿಯಾ
ವಿಹೆಚ್'ಪಿ ನಾಯಕ ಪ್ರವೀಣ್ ತೊಡಾಗಿಯಾ
ಅಹಮದಾಬಾದ್: ವಿಹೆಚ್'ಪಿ ನಾಯಕ ಪ್ರವೀಣ್ ತೊಡಾಗಿಯಾ ಅವರು 'ಝೆಡ್ ಪ್ಲಸ್' ಭದ್ರತೆಯನ್ನು ಹೊಂದಿದ್ದು, ಎನ್ ಕೌಂಟರ್ ನಡೆಸುವುದು ಅಸಾಧ್ಯ ಎಂದು ಅಹಮದಾಬಾದ್ ಪೊಲೀಸರು ಬುಧವಾರ ಸ್ಪಷ್ಟನೆ ನೀಡಿದ್ದಾರೆ. 
ಪ್ರವೀಣ್ ತೊಗಾಡಿಯಾ ಆರೋಪವನ್ನು ತಳ್ಳಿಹಾಕಿರುವ ಅಹಮದಾಬಾದ್ ಪೊಲೀಸರು ಆರೋಪ ಕುರಿತಂತೆ ಸ್ಪಷ್ಟನೆ ನೀಡಿದ್ದು, ಝೆಡ್ ಪ್ಲಸ್ ಭದ್ರತೆಯನ್ನು ಹೊಂದಿರುವ ವ್ಯಕ್ತಿಯನ್ನು ಎನ್ ಕೌಂಟರ್ ನಡೆಸಿ ಹತ್ಯೆ ಮಾಡುವುದು ಅಸಾಧ್ಯ ಎಂದು ಹೇಳಿದ್ದಾರೆ. 
ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಜೆ.ಕೆ. ಭಟ್ ಅವರು ಮಾತನಾಡಿ, ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ತೊಡಾಗಿಯಾ ಅವರು ಪ್ರಜ್ಞೆಯಲ್ಲಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ತೊಗಾಡಿಯಾ ಆಪ್ತ ಘನ್ಶ್ಯಾಮ್ ಚಂದ್ರಾ ಅವರ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ತಲುಪುತ್ತಿದ್ದಂತೆಯೇ ತೊಗಾಡಿಯಾ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ. ನಂತರ ತೊಗಾಡಿಯಾ ಅವರ ಆಪ್ತರೇ 108 ಅ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆಂದು ಹೇಳಿದ್ದಾರೆ. 
ಝೆಡ್ ಪ್ಲಸ್ ಭದ್ರತೆ ಅತ್ಯುತ್ತಮವಾದ ಭದ್ರತೆಯಾಗಿದೆ. ಈ ಭದ್ರತೆಯಲ್ಲಿ ಪೈಲಟ್ ವಾಹನ, ಬುಲೆಟ್ ಪ್ರೂಫ್ ವಾಹನ ಮತ್ತು ಎಕೆ-47 ರೈಫಲ್ಸ್ ಹೊಂದಿರುವ ಭದ್ರತಾ ಸಿಬ್ಬಂದಿಗಳು ಇರುತ್ತಾರೆ. ಇಂತಹ ಭದ್ರತೆಯನ್ನು ಹೊಂದಿರುವ ವ್ಯಕ್ತಿಯನ್ನು ಎನ್ ಕೌಂಟರ್ ನಡೆಸುವುದು ಅಸಾಧ್ಯ. ತೊಗಾಡಿಯಾ ಆರೋಪ ಕಲ್ಪನೆಯಾಗಿದೆ ಎಂದು ತಿಳಿಸಿದ್ದಾರೆ. 
ಪಲ್ಡಿ ಪ್ರದೇಶದಲ್ಲಿರುವ ವಿಹೆಚ್'ಪಿ ಕಚೇರಿಯನ್ನು ಬಿಟ್ಟ ತೊಗಾಡಿಯಾ ಅವರು, ಬಳಿಕ ಥಲ್ಟೆಜ್ ನಲ್ಲಿರುವ ಘನ್ಶ್ಯಾಮ್ ಚಂದ್ರ ಅವರ ನಿವಾಸಕ್ಕೆ ಬೆಳಗ್ಗೆ 10.30ರ ಸುಮಾರಿಗೆ ತೆರಳಿದ್ದಾರೆ. ಬಳಿಕ ಸಂಜೆವರೆಗೂ ಅವರ ನಿವಾಸದಲ್ಲಿಯೇ ಇದ್ದು, ರಾತ್ರಿ 8.35ಕ್ಕೆ ತೊಗಾಡಿಯಾ ಹಾಗೂ ಚಂದ್ರ ಅವರು ಕಾರಿನಲ್ಲಿ ಸರ್ದಾನಗರಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಘನ್ಶ್ಯಾಮ್ ಅವರು ಆ್ಯಂಬುಲೆನ್ಸ್ ಗೆ ಕರೆ ಮಾಡಿ, ವ್ಯಕ್ತಿಯೊಬ್ಬು ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆಂದು ತಿಳಿಸಿದ್ದಾರೆ. 
ಆ್ಯಂಬುಲೆನ್ಸ್ ಬರುತ್ತಿದ್ದಂತೆಯೇ ಘನ್ಶ್ಯಾಮ್ ಅವರು ಆ್ಯಂಬುಲೆನ್ಸ್ ಸಿಬ್ಬಂದಿಗಳಿಗೆ ಶಾಹಿಬಾಗ್ ನಲ್ಲಿರುವ ಚಂದ್ರಮಣಿ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಸಂಜೆ 6 ಗಂಟೆ ಸುಮಾರಿಗೆ ವೈದ್ಯರೊಂದಿಗೆ ಮಾತುಕತೆ ನಡೆಸಿರುವ ದಾಖಲೆಗಳು ಕೂಡ ಲಭ್ಯವಾಗಿದೆ. 
ತೊಗಾಡಿಯಾ ಅವರು ಹೊರಗೆ ಹೋಗಬೇಕೆಂದಿದ್ದರೆ, ಭದ್ರತೆಯೊಂದಿಗೆ ಹೊರಗೆ ಹೋಗಬೇಕಿತ್ತು. ಭದ್ರತೆಯೊಂದಿಗೆ ಹೊರಗೆ ಹೋಗಿದ್ದರೆ ಇವೆಲ್ಲಾ ಅವಾಂತರಗಳಾವುದೂ ಆಗುತ್ತಿರಲಿಲ್ಲ ಅಧಿಕಾರಿ ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ತೊಗಾಡಿಯಾ ಅವರು ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿತ್ತು. ಬಳಿಕ ನಿನ್ನೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಇದಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ತೊಗಾಡಿಯಾ ಅವರು, ಹಿಂದೂ ಸಮುದಾಯದ ಪರವಾಗಿ ದನಿ ಎತ್ತಿದ್ದಕ್ಕೆ ನನ್ನ ದನಿಯನ್ನು ಅಡಗಿಸಲು ಯತ್ನ ನಡೆಸುತ್ತಿದ್ದಾರೆ. ಹಿಂದುತ್ವ ಮತ್ತು ರಾಮ ಮಂದಿರದ ಬಗ್ಗೆ ನಾನು ಮಾತುನಾಡುವುದನ್ನು ಬಯಸದ ಜನ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ನನ್ನನ್ನು ಎನ್ ಕೌಂಟರ್ ನಡೆಸಿರುವ ಯತ್ನಗಳು ನಡೆದಿವೆ ಎಂದು ಆರೋಪ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com