ಅಗ್ನಿ-5 ಉಡಾವಣೆಗೆ ಉಪಕರಣಗಳು ಬಂದಿದ್ದು ತಮಿಳುನಾಡಿನಿಂದ: ನಿರ್ಮಲಾ ಸೀತಾರಾಮನ್

ಭಾರತದ ಅತ್ಯಂತ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ "ಅಗ್ನಿ-5" ಕ್ಷಿಪಣೆ ಪರೀಕ್ಷೆ ಯಶಸ್ವಿಯಾಗಿದ್ದು, ಅಗ್ನಿ-5 ಯಶಸ್ವಿ ಉಡಾವಣೆಗೆ ತಮಿಳುನಾಡು ರಾಜ್ಯ ಮಹತ್ವದ ಪಾತ್ರ ವಹಿಸಿದೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
ನವದೆಹಲಿ: ಭಾರತದ ಅತ್ಯಂತ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ "ಅಗ್ನಿ-5" ಕ್ಷಿಪಣೆ ಪರೀಕ್ಷೆ ಯಶಸ್ವಿಯಾಗಿದ್ದು, ಅಗ್ನಿ-5 ಯಶಸ್ವಿ ಉಡಾವಣೆಗೆ ತಮಿಳುನಾಡು ರಾಜ್ಯ ಮಹತ್ವದ ಪಾತ್ರ ವಹಿಸಿದೆ.
ಅಗ್ನಿ-5 ಉಡಾವಣೆಗೆ ಬಳಕೆ ಮಾಡಲಾಗಿದ್ದ ಉಪಕರಣಗಳು ತಮಿಳುನಾಡಿನದ್ದಾಗಿತ್ತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. " ಅಗ್ನಿ-5 ಪರೀಕ್ಷಾರ್ಥ ಉಡಾವಣೆಗೆ ಬಳಕೆ ಮಾಡಲಾದ ಅನೇಕ ಉಪಕರಣಗಳು ತಮಿಳುನಾಡಿನದ್ದಾಗಿತ್ತು" ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 
ಅಗ್ನಿ-5 ಪರೀಕ್ಷೆ ಯಶಸ್ವಿಯಾಗಿರುವುದಕ್ಕೆ ಆಮದು ಮಾಡಿಕೊಂಡಿರುವ ಉಪಕರಣಗಳು ಮಾತ್ರವಷ್ಟೇ ಸಹಕಾರಿಯಾಗಿಲ್ಲ, ಡಿಆರ್ ಡಿಒ ಕೈಗೆತ್ತಿಕೊಂಡಿದ್ದ ಸಂಶೋಧನಾ ಚಟುವಟಿಕೆಗಳೂ ಸಹ ಮುಖ್ಯವಾಗಿದೆ, ಉಪಕರಣಗಳ ಜೋಡಣೆ ಯಶಸ್ವಿಯಾಗಿದ್ದು ಪರೀಕ್ಷೆಯೂ ಯಶಸ್ವಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com