ಇಂದು ಬೆಳಗ್ಗೆ ಮುಂಬೈ ದಾಳಿ ಸಂತ್ರಸ್ತರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದ ಇಸ್ರೇಲ್ ಪ್ರಧಾನಿ ನೇತಾನ್ಯಹು ಸಂಜೆ ನಾರಿಮನ್ ಹೌಸ್ ಗೆ ಭೇಟಿ ನೀಡಿ, ಬಾಲಕ ಮೊಶೆಯ ಜತೆಗೆ ನಗುನಗುತ್ತಲೆ ಕುಶಲೋಪರಿ ನಡೆಸಿದರು. ಮೊಶೆಯ ಹಣೆಗೆ ಮುತ್ತಿಟ್ಟು, ಹೆಗಲ ಮೇಲೆ ಕೈಹಾಕಿ, ಮೈದವಡಿ ಸ್ನೇಹಪರದಿಂದಲೇ ಇಸ್ರೇಲ್ ಪ್ರಧಾನಿ ಮಾತನಾಡಿದರು.