ಬಿಎಸ್ಎಫ್ ಮಹಾನಿರ್ದೇಶಕ ಕೆ.ಕೆ. ಶರ್ಮಾ (ಸಂಗ್ರಹ ಚಿತ್ರ)
ಬಿಎಸ್ಎಫ್ ಮಹಾನಿರ್ದೇಶಕ ಕೆ.ಕೆ. ಶರ್ಮಾ (ಸಂಗ್ರಹ ಚಿತ್ರ)

ಒಲ್ಒಸಿ, ಅಂತರಾಷ್ಟ್ರೀಯ ಗಡಿ ಬಳಿ ಪರಿಸ್ಥಿತಿ ಉದ್ವಿಗ್ನ: ಬಿಎಸ್ಎಫ್ ಮಹಾನಿರ್ದೇಶಕ ಕೆಕೆ ಶರ್ಮಾ

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಮತ್ತು ಅಂತರಾಷ್ಟ್ರೀಯ ಗಡಿ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ಬಿಎಸ್ಎಫ್ ಮಹಾನಿರ್ದೇಶಕ ಕೆ.ಕೆ. ಶರ್ಮಾ ಅವರು ಗುರುವಾರ ಹೇಳಿದ್ದಾರೆ...
ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಮತ್ತು ಅಂತರಾಷ್ಟ್ರೀಯ ಗಡಿ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ಬಿಎಸ್ಎಫ್ ಮಹಾನಿರ್ದೇಶಕ ಕೆ.ಕೆ. ಶರ್ಮಾ ಅವರು ಗುರುವಾರ ಹೇಳಿದ್ದಾರೆ. 
ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಗಡಿ ನಿಯಂತ್ರಣ ರೇಖೆ ಬಳಿ ಸುದೀರ್ಘವಾಗಿ ಕದನ ವಿರಾಮ ಉಲ್ಲಂಘನೆಯಾಗುತ್ತಿದೆ. ಇದೀಗ ಅಂತರಾಷ್ಟ್ರೀಯ ಗಡಿಯಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. 
ಬುಧವಾರ ರಾತ್ರಿ 11 ಗಂಟೆ ಸುಮಾರಿಗೂ ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರ ಆರ್'ಎಸ್ ಪುರ ಸೆಕ್ಟರ್ ಬಳಿಕ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಿದೆ. ಬಿಎಸ್ಎಫ್ ಎಂದಿಗೂ ಮೊದಲೂ ದಾಳಿ ಮಾಡುವುದಿಲ್ಲ. ಪಾಕಿಸ್ತಾನ ದಾಳಿ ಮಾಡಿದರೆ ದಾಳಿಗೆ ದಿಟ್ಟ ಉತ್ತರವನ್ನು ನೀಡುತ್ತದೆ. ಪಾಕಿಸ್ತಾನದ ದಾಳಿಗೆ ಹುತಾತ್ಮನಾದ ಮುಖ್ಯ ಪೇದೆ ಸುರೇಶ್ ಅವರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ತಿಳಿಸಿದ್ದಾರೆ. 
ಗಡಿ ನುಸುಳುವಿಕೆ ಕುರಿತಂತೆ ಇದೇ ವೇಳೆ ಮಾತನಾಡಿರುವ ಅವರು, ಗಡಿ ನುಸುಳುವಿಕೆಯ ಯತ್ನಗಳು ನಡೆದಿರುವ ಸಂಭವಗಳಿವೆ. ಆದರೆ, ನಮ್ಮ ಯೋಧರು ಇಂತಹ ಯತ್ನಗಳು ಯಶಸ್ವಿಯಾಗದಂತೆ ನೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com