48ನೇ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಮೋದಿ ಮಂತ್ರ, ಭಾರತದ ಯೋಗ!

ಜ.22 ರಿಂದ ವಿಶ್ವ ಆರ್ಥಿಕ ವೇದಿಕೆ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.
ಯೋಗ
ಯೋಗ
Updated on: 
ದಾವೋಸ್: ಜ.22 ರಿಂದ ವಿಶ್ವ ಆರ್ಥಿಕ ವೇದಿಕೆ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. 
48 ನೇ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ವಿಶ್ವದ ವಿವಿಧ ಭಾಗಗಳಿಂದ ಉದ್ಯಮ, ರಾಜಕೀಯ, ಕಲೆ, ನಾಗರಿಕ ಸಮಾಜದ ನಾಯಕರು ಸೇರಿದಂತೆ ಸುಮಾರು 3,000 ವಿಶ್ವನಾಯಕರು ಭಾಗವಹಿಸಲಿದ್ದು, ಭಾರತವೊಂದರಿಂದಲೇ ಸುಮಾರು 130 ಜನರು ಭಾಗವಹಿಸಿದ್ದಾರೆ. 
ಡಬ್ಲ್ಯೂಇಎಫ್ ಅಧ್ಯಕ್ಷ ಕ್ಲಾಸ್ ಶ್ವಾಬ್ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಲಿದ್ದು, ಬಾಲಿವುಡ್ ನ ಸೂಪರ್ ಸ್ಟಾರ್ ಗಳಾದ ಶಾರೂಖ್ ಖಾನ್, ಆಸ್ಟ್ರೇಲಿಯಾದ ನಟಿ ಕೇಟ್ ಬ್ಲ್ಯಾಂಚೆಟ್, ಪ್ರಸಿದ್ಧಿ ಸಂಗೀತಕಾರರಾದ ಎಲ್ಟನ್ ಜಾನ್  ಅವರಿಗೆ ಸಮಾಜಕ್ಕೆ ಅವರ ಕೊಡುಗೆಯನ್ನು ಗುರುತಿಸಿ ಕ್ರಿಸ್ಟಲ್ ಅವಾರ್ಡ್ ನ್ನು ಕೊಡಮಾಡಲಾಗುತ್ತದೆ. ಇದೇ ವೇಳೆ ವೇದಿಕೆಯಲ್ಲಿ ಯೋಗದ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com