ಕಣಿವೆ ಪ್ರದೇಶಗಳಲ್ಲಿ ಮೈ ನಡುಗಿಸುವ ಚಳಿ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀತಗಾಳಿ ಆರ್ಭಟ ಮುಂದುವರೆದಿದೆ.ಮುಂದುವರೆದಿದೆ. ಸಾಮಾನ್ಯ ತಾಪಮಾನ ಕನಿಷ್ಠಮಟ್ಟಕ್ಕೆ ಇಳಿದಿದ್ದು, ವಿಪರೀತ ಚಳಿಯಿಂದಾಗಿ ಮೈ ತರಗುಟ್ಟುವಂತಾಗಿದೆ.

ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀತಗಾಳಿ ಆರ್ಭಟ ಮುಂದುವರೆದಿದೆ.ಸಾಮಾನ್ಯ ತಾಪಮಾನ ಕನಿಷ್ಠಮಟ್ಟಕ್ಕೆ ಇಳಿದಿದ್ದು, ವಿಪರೀತ ಚಳಿಯಿಂದಾಗಿ ಮೈ ತರಗುಟ್ಟುವಂತಾಗಿದೆ.

ಕಾರ್ಗಿಲ್, ಲಡಕ್ ,ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ರಾತ್ರಿ -18.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಶ್ರೀನಗರ ಹವಾಮಾನ ಇಲಾಖೆ ತಿಳಿಸಿದೆ.

ಎರಡನೇ ಅತ್ಯಂತ ಕಡಿಮೆ ಉಷ್ಣಾಂಶ ಪ್ರದೇಶವಾದ ಲೇಹ್ ನಲ್ಲಿ -14.3 ಡಿಗ್ರಿ ಸೆಲ್ಸಿಯಸ್, ಶ್ರೀಗನರದಲ್ಲಿ -4.5 ಡಿಗ್ರಿ ಸೆಲ್ಸಿಯಸ್ , ಉತ್ತರ ಕಾಶ್ಮೀರದಲ್ಲಿ -4.9 ಡಿಗ್ರಿ,, ಕುಪ್ವಾರದಲ್ಲಿ -4. 9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆರೋಗ್ಯ ರೆಸಾರ್ಟ್ ಗೆ ಹೆಸರಾಗಿರುವ ಪಾಹಲ್ಗಾಮಾದಲ್ಲಿ ನಿನ್ನೆ ರಾತ್ರಿ -5.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಳೆ  ದ್ವಿಪ್ರದೇಶಗಳಲ್ಲಿ ಅಲ್ಪಪ್ರಮಾಣದ ಮಳೆ ಹಾಗೂ ಮಂಜು ಬೀಳುವ ಸಾಧ್ಯತೆ ಇದೆ  ಚಳಿಗಾಲದ 40 ದಿನಗಳ ಈ ಅವಧಿಯಲ್ಲಿ ಕಾಶ್ಮೀರದಲ್ಲಿ  ಉಷ್ಣಾಂಶದಲ್ಲಿ ಏರುಪೇರಾಗಿ ಆಗ್ಗಾಗೆ ಮಂಜು ಬೀಳುತ್ತಿರುತ್ತದೆ ಎಂದು ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com