ಶತಾಬ್ದಿ, ರಾಜಧಾನಿಗೆ ವಿದಾಯ ಸಾಧ್ಯತೆ, ಜೂನ್ ತಿಂಗಳ ಹೊತ್ತಿಗೆ ವಿಶ್ವದರ್ಜೆಯ ರೈಲು ಸೇವೆ!

ಪ್ರಮುಖ ಬೆಳವಣಿಗೆಯಲ್ಲಿ ಭಾರತೀಯ ರೈಲ್ವೇ ಇಲಾಖೆ ವಿಶ್ವದರ್ಜೆಯ ಎರಡು ಹೊಸ ರೈಲುಗಳನ್ನು ಹಳಿಗಿಳಿಸಲು ನಿರ್ಧರಿಸಿದ್ದು, ಈ ರೈಲಿನ ಬದಲಾಗಿ ಪ್ರಸ್ತುತ ಸೇವೆಯಲ್ಲಿರುವ ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ಭಾರತೀಯ ರೈಲ್ವೇ ಇಲಾಖೆ ವಿಶ್ವದರ್ಜೆಯ ಎರಡು ಹೊಸ ರೈಲುಗಳನ್ನು ಹಳಿಗಿಳಿಸಲು ನಿರ್ಧರಿಸಿದ್ದು, ಈ ರೈಲಿನ ಬದಲಾಗಿ ಪ್ರಸ್ತುತ ಸೇವೆಯಲ್ಲಿರುವ ಶತಾಬ್ದಿ ಮತ್ತು ರಾಜಧಾನಿ ಎಕ್ಸ್  ಪ್ರೆಸ್ ರೈಲುಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಭಾರತೀಯ ರೈಲ್ವೇ ಇಲಾಖೆ ಇದೇ ವರ್ಷ ಜೂನ್‌ 18ರಿಂದ ದೇಶದಲ್ಲಿ ಎರಡು ವಿಶ್ವ ದರ್ಜೆಯ ರೈಲುಗಳನ್ನು ಪರಿಚಯಿಸಲಿದ್ದು, ಈ ಪೈಕಿ ಇದೇ ವರ್ಷದ ಜೂನ್ 18ರೊಳಗೆ ಟ್ರೈನ್ 18 ಎಂಬ ರೈಲನ್ನು ಮತ್ತು  2020ರ ವೇಳೆ ಟ್ರೈನ್ 20 ಎಂಬ ರೈಲನ್ನು ಹಳಿಗಿಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಈ ಎರಡು ವಿಶ್ವ ದರ್ಜೆ ರೈಲುಗಳಿಂದ ಪ್ರಯಾಣದ ಅವಧಿಯು ಶೇ.20ರಷ್ಟು ಕಡಿಮೆಯಾಗಲಿದ್ದು, ಜತೆಗೆ ಪ್ರಯಾಣಿಕರಿಗೆ ವಿಶ್ವ ದರ್ಜೆಯ  ಪ್ರಯಾಣಿಕ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ಆಂಗ್ಲ ಪತ್ರಿಕೆಯ ವರದಿಯ ಅನ್ವಯ ಈ ಎರಡು ರೈಲುಗಳು ಈಗ ಸೇವೆಯಲ್ಲಿರುವ ಶತಾಬ್ದಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ ರೈಲುಗಳ ಸ್ಥಾನವನ್ನು ಪಡೆದುಕೊಳ್ಳಲಿದ್ದು, ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ  ಸೇವೆಯನ್ನು ನಿಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ವಿಶ್ವ ದರ್ಜೆಯ ಈ ಎರಡು ರೈಲುಗಳನ್ನು ರೈಲ್ವೆಯ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್)ಯಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗುತ್ತಿದ್ದು, ಇದೇ ವರ್ಷ  ಜೂನ್‌ ಒಳಗಾಗಿ 16 ಕೋಚ್‌ಗಳ ಮೊದಲ ರೈಲನ್ನು ಹೊರ ತರುವ ನಿರೀಕ್ಷೆ ಇದೆ ಎಂದು ಐಸಿಎಫ್ ತಿಳಿಸಿದೆ.
ಇನ್ನು ಜೂನ್ ನಲ್ಲಿ ಸೇವೆಗೆ ಲಭ್ಯವಾಗುವ ಟ್ರೈನ್‌ ನಂಬರ್‌ 18  ಸಂಪೂರ್ಣ ಉಕ್ಕಿನಿಂದ ನಿರ್ಮಾಣವಾಗುತ್ತಿದ್ದು, ಟ್ರೈನ್‌ ನಂಬರ್‌ 20 ಅಲ್ಯುಮಿನಿಯಂ ನದ್ದಾಗಿರುತ್ತದೆ. ವಿಶ್ವ ದರ್ಜೆಯ ಈ ರೈಲುಗಳು ಗಂಟೆಗೆ 160 ಕಿ.ಮೀ.  ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿದ್ದು, ಇವುಗಳಲ್ಲಿರುವ ಏರೋಡೈನಾಮಿಕ್‌ ಮೂಗು ಕಡಿಮೆ ವಾಯು ಒತ್ತಡಕ್ಕೆ ಕಾರಣವಾಗಲಿದೆ. ಇನ್ನು ರೈಲುಗಳ ಪ್ರಯಾಣದ ಅವಧಿಯು ಪ್ರಸ್ತುತ ಇರುವ ಶತಾಬ್ದಿ ಮತ್ತು ರಾಜಧಾನಿ ಎಕ್ಸ್  ಪ್ರೆಸ್ ರೈಲುಗಳಿಗಿಂತಲೂ ಶೇ. 20ರಷ್ಟು ತಗ್ಗಲಿದೆ ಎಂದು ಇಲಾಖೆ ಹೇಳಿದೆ. ಶತಾಬ್ದಿ ಮತ್ತು ರಾಜಧಾನಿ ರೈಲುಗಳು ಗಂಟೆಗೆ 150 ಕಿ.ಮೀ.ಗಳ ಗರಿಷ್ಠ ವೇಗದಲ್ಲಿ ಓಡಬಲ್ಲವಾದರೂ ಅವುಗಳ ಸರಾಸರಿ ವೇಗ ಗಂಟೆಗೆ 90 ಕಿ.ಮೀ.  ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com