ಈ ಹಿಂದೆ ಆಧಾರ್ ಸೋರಿಕೆ ಸಂಬಂಧ ವರದಿ ಮಾಡಿದ್ದ ಪತ್ರಕರ್ತೆಯ ಸಾಧನೆಯನ್ನು ಕೊಂಡಾಡಿದ್ದ ಸ್ನೋಡೆನ್ ಇದೀಗ ಭಾರತದ ಗುಪ್ತಚರ ಸಂಸ್ಥೆ ರಾ ಮಾಜಿ ಮುಖ್ಯಸ್ಥರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಭಾರತದ ಮಾಜಿ ರಾ ಮುಖ್ಯಸ್ಥರು ಸಾರ್ವಜನಿಕ ಸಂಸ್ಥೆಗಳಾದ ಬ್ಯಾಂಕ್ ಗಳು, ಟೆಲಿಕಾಂ ಸಂಸ್ಥೆಗಳು, ಸಾರಿಗೆ ಸಂಸ್ಥೆಗಳು ಆಧಾರ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಎಡ್ವರ್ಡ್ ಸ್ನೋಡೆನ್ ಸಹಮತ ವ್ಯಕ್ತಪಡಿಸಿದ್ದು, ಭಾರತ ಮಾಜಿ ರಾ ಅಧಿಕಾರಿಯ ಹೇಳಿಕೆಗೆ ನಾನು ಬೆಂಬಲ ವ್ಯಕ್ತಪಡಿಸಿತ್ತೇನೆ. ಅನಿವಾರ್ಯತೆ ಇಲ್ಲದೇ ಇದ್ದರೂ ಆಧಾರ್ ಬೇಕೇ ಬೇಕು ಎಂದು ಕೇಳುವ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ನೋಡೆನ್ ಹೇಳಿದ್ದಾರೆ.