ಕೇರಳ ಲವ್ ಜಿಹಾದ್: ಹಾದಿಯಾ ವೈವಾಹಿಕ ಸ್ಥಿತಿ ಬಗ್ಗೆ ಎನ್ಐಎ ತನಿಖೆ ನಡೆಸುವಂತಿಲ್ಲ- ಸುಪ್ರೀಂ ಕೋರ್ಟ್

ಕೇರಳ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಅಭಿಪ್ರಾಯ ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಹಾದಿಯಾ ವೈವಾಹಿಕ ಸ್ಥಿತಿ ಬಗ್ಗೆ ಎನ್ಐಎ ತನಿಖೆ ನಡೆಸುವಂತಿಲ್ಲ ಎಂದು ಹೇಳಿದೆ.
ಹಾದಿಯಾ
ಹಾದಿಯಾ
ನವದೆಹಲಿ: ಕೇರಳ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಅಭಿಪ್ರಾಯ ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಹಾದಿಯಾ ವೈವಾಹಿಕ ಸ್ಥಿತಿ ಬಗ್ಗೆ ಎನ್ಐಎ ತನಿಖೆ ನಡೆಸುವಂತಿಲ್ಲ ಎಂದು ಹೇಳಿದೆ. 
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ಹಾದಿಯಾ ಪ್ರಾಪ್ತ ವಯಸ್ಕಳಾಗಿರುವುದರಿಂದ ಆಕೆಯ ವೈವಾಹಿಕ ಸ್ಥಿತಿಯ ಬಗ್ಗೆ ಎನ್ಐಎ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 
ಹಾದಿಯಾ-ಶಫಿನ್ ಜಹಾನ್ ನ ವಿವಾಹ ಕಾನೂನು ಬದ್ಧವೋ ಅಲ್ಲವೋ ಎಂಬ ಬಗ್ಗೆ ಎನ್ಐಎ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದ್ದು, ಎನ್ಐಎ ಕೋರ್ಟ್ ಗೆ ವರದಿ ಸಲ್ಲಿಕೆ ಮಾಡಿ ಕೋರ್ಟ್ ಆಕೆಯ ವಿದ್ಯಾಭ್ಯಾಸವನ್ನು ಮುಂದುವರೆಸಲು ಅನುಮತಿ ನೀಡುತ್ತದೆ ಎಂಬ ವಿಶ್ವಾಸವಿದೆ, ಆಕೆ ಸುರಕ್ಷಿತಳಾಗಿದ್ದಾಳೆ ಎಂಬುದಷ್ಟೇ ಸಂತಸದ ವಿಷಯ ಮುಂದೇನಾಗುತ್ತದೆ ಕಾದು ನೋಡೋಣ ಎಂದು ಹಾದಿಯಾ ತಂದೆ ಪರ ವಕೀಲರು ಹೇಳಿದ್ದಾರೆ. 2017 ರ ನವೆಂಬರ್ ನಲ್ಲಿ ಕೋರ್ಟ್ ಗೆ ಹೇಳಿಕೆ ನೀಡಿದ್ದ ಹಾದಿಯಾ, ತಾನು ತನ್ನ ಪತಿ ಶಫಿನ್ ಜಹಾನ್ ಅವರೊಂದಿಗೇ ಇರಲು ಇಚ್ಛಿಸುತ್ತೇನೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com