ಸೊಹ್ರಾಬುದ್ದೀನ್ ಪ್ರಕರಣ: ಅಮಿತ್ ಶಾ ಹೆಸರು ಕೈಬಿಟ್ಟದ್ದನ್ನು ಪ್ರಶ್ನಿಸಿದ್ದ ಪಿಐಎಲ್ ಗೆ ಸಿಬಿಐ ವಿರೋಧ

ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಕೈಬಿಟ್ಟ ಕೆಳ ನ್ಯಾಯಾಲಯದ ಆದೇಶವನ್ನು......
ಅಮಿತ್ ಶಾ
ಅಮಿತ್ ಶಾ
Updated on
ಮುಂಬೈ: ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಕೈಬಿಟ್ಟ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಬಾರದೆನ್ನುವ ಏಜೆನ್ಸಿಯ ನಿರ್ಧಾರಕ್ಕೆ ವಿರುದ್ಧವಾಗಿ ಬಾಂಬೆ ಹೈಕೋರ್ಟ್ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ ಕ್ರಮವನ್ನು ಸಿಬಿಐ ವಿರೋಧಿಸಿದೆ.
"ನಾವು ಪಿಐಎಲ್ ಅರ್ಜಿಯನ್ನು ವಿರೋಧಿಸುತ್ತಿದ್ದೇವೆ, ಅರ್ಜಿಯಲ್ಲಿರುವ ಅಂಶಗಳ ಸತ್ಯಾಸತ್ಯತೆಗಳ ಬಗೆಗೆ ನಮಗೆ ಸಂಶಯವಿದೆ. ಪ್ರಕರಣದಿಂದ ಅಮಿತ್ ಶಾ ಹೆಸರು ಕೈಬಿಟ್ಟಿರುವ ಡಿಸೆಂಬರ್ 2014ರ ಆದೇಶಕ್ಕೂ ಕೆಲವು ಮಿತಿಗಳಿದೆ." ಸಿಬಿಐ ಕೌನ್ಸಿಲ್ ಅನಿಲ್ ಸಿಂಗಝೈಕೋರ್ಟ್ ಗೆ  ತಿಳಿಸಿದ್ದಾರೆ.  ಈ ಮೊದಲು ಎನ್ ಕೌಂಟರ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುಜರಾತಿನಿಂದ ಮುಂಬೈಗೆ ಸ್ಥಳಾಂತರಿಸಿತ್ತು ಮತ್ತು ಅದನ್ನು ತ್ವರಿತವಾಗಿ ನಡೆಸಬೇಕು ಮತ್ತು ಅಂತಿಮ ತೀರ್ಪು ಪ್ರಕಟಿಸಬೇಕೆಂದು ಆದೇಶಿಸಿತ್ತು ಎನ್ನುವುದನ್ನು ದೇವ್ ಹೈಕೋರ್ಟ್ ಗೆ ಮನವರಿಕೆ ಮಾಡಿದ್ದಾರೆ.
"ನಾವು ಅದನ್ನು ಅರ್ಜಿದಾರರಿಗೆ ಬಿಡುತ್ತೇವೆ ಆದರೆ ಸಂಸ್ಥೆ (ಹೈಕೋರ್ಟ್) ಸಾಧ್ಯವಾದಷ್ಟು ಬೇಗಪ್ರಕರಣವನ್ನು ಮುಗಿಸಬೇಕೆಂದು ನಾವು ಭಾವಿಸುತ್ತೇವೆ, ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ದೇವ್ ಅವರಿಗೆ ನಾವು ವಿನಂತಿಸುತ್ತೇವೆ." ನ್ಯಾಯಮೂರ್ತಿಗಳದ ಧರ್ಮಾಧಿಕಾರಿ ಹೇಳಿದ್ದಾರೆ.
ಸಿಬಿಐ ಪರ ವಕೀಲರು ಸಮಯಾವಕಾಶ ಕೋರಿದ ಬಳಿಕ ನ್ಯಾಯಮೂರ್ತಿಗಳಾದ ಎಸ್. ಸಿ. ಧರ್ಮಾಧಿಕಾರಿ ಮತ್ತು ಭಾರ್ತಿ ದಾಂಗ್ರೆ ಅವರ ವಿಚಾರಣಾ ಪೀಠ ಫೆಬ್ರವರಿ 13ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಕಳೆದ ವಾರ ಬಾಂಬೆ ವಕೀಲರ ಅಸೋಸಿಯೇಷನ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು "ಕಾನೂನು ಬಾಹಿರ, ನಿರಂಕುಶ ಮತ್ತು ಕಾನೂನಿನ ದುರ್ಬಳಕೆ" ಎನ್ನುವುದಾಗಿ ಹೇಳಿ ಸಿಬಿಐ ವಿಶೇಷ ನ್ಯಾಯಾಲಯ ಡಿಸೆಂಬರ್ 30, 2014ರ ಆದೇಶವನ್ನು ಪ್ರಶ್ನೆ ಮಾಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com