ಮೇವು ಹಗರಣ: ಮೂರನೇ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್, ಜಗನ್ನಾಥ್ ಮಿಶ್ರಾ ಅಪರಾಧಿ

ಮೇವು ಹಗರಣದ ಮೂರನೇ ಕೇಸಿನಲ್ಲಿ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ....
ಲಾಲೂ ಪ್ರಸಾದ್ ಯಾದವ್
ಲಾಲೂ ಪ್ರಸಾದ್ ಯಾದವ್
ರಾಂಚಿ: ಮೇವು ಹಗರಣದ ಮೂರನೇ ಕೇಸಿನಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರನ್ನು ಅಪರಾಧಿ ಎಂದು ಕೇಂದ್ರ ತನಿಖಾ ದಳ(ಸಿಬಿಐ) ತೀರ್ಮಾನಿಸಿದೆ. ಮೂರನೇ ಮೇವು ಹಗರಣ ಕೇಸಿನಲ್ಲಿ ಇಂದು ಅಪರಾಹ್ನ 2 ಗಂಟೆಯ ಮೇಲೆ ವಿಶೇಷ ಸಿಬಿಐ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. 
ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಅವರಿಗೆ ಇದು ಮತ್ತೊಂದು ಹಿನ್ನೆಡೆಯಾಗಿದ್ದು ಅವರು ಈಗಾಗಲೇ ಇನ್ನೊಂದು ಮೇವು ಹಗರಣ ಕೇಸಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
1990ರ ಆರಂಭದಲ್ಲಿ ಚೈಬಾಸ ಖಜಾನೆಯಿಂದ ಹಣ ಲೂಟಿ ಮಾಡಿದ ಆರೋಪಕ್ಕೆ ಸಂಬಂಧಪಟ್ಟ ಕೇಸು ಇದಾಗಿದೆ. ಮಂಜೂರಾಗಿದ್ದ 7.1 ಲಕ್ಷಕ್ಕೆ ಬದಲಾಗಿ 33.7 ಕೋಟಿ ರೂಪಾಯಿಗಳನ್ನು ಖಜಾನೆಯಿಂದ ಲಾಲೂ ಅವರು ತೆಗೆದುಕೊಂಡ ಆರೋಪ ಎದುರಿಸುತ್ತಿದ್ದರು.
ಮತ್ತೊಬ್ಬ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅವರು ಕೂಡ ಅಪರಾಧಿ ಎಂದು ಸಿಬಿಐ ತೀರ್ಪು ನೀಡಿದೆ.
ಲಾಲೂ ಪ್ರಸಾದ್ ಯಾದವ್ ಅವರು ಈಗಾಗಲೇ ಮೇವು ಹಗರಣಕ್ಕೆ ಸಂಬಂಧಪಟ್ಟ ಎರಡು ಕೇಸುಗಳಲ್ಲಿ ಅಪರಾಧಿಯೆಂದು ಸಾಬೀತಾಗಿದೆ.
ಲಾಲೂ ಅವರು ಈಗ ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಎರಡನೇ ಮೇವು ಹಗರಣ ಕೇಸಿನಲ್ಲಿ ಕಳೆದ ಡಿಸೆಂಬರ್ 23ರಂದು ಆರೋಪಿ ಎಂದು ಸಾಬೀತಾಗಿದ್ದರು. ಈ ಸಂಬಂಧ ಕಳೆದ ಜನವರಿ 6ರಂದು ಮೂರೂವರೆ ವರ್ಷ ಜೈಲುಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡವನ್ನು ಅವರಿಗೆ ವಿಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com