ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯೆ ನೀಡಿದ ಅಹ್ಮದ್, ಮಗು ದೊಡ್ಡವನಾಗುತ್ತಾ ಹೋದಂತೆ ಬುಡಕಟ್ಟು ಜನಾಂಗದವರ ಚಹರೆ ಕಂಡು ನಮಗೆ ಸಂಶಯ ಬಂದಿತು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಕ್ಕೆ ಆಸ್ಪತ್ರೆಯ ದಾಖಲೆ ನೋಡಿ ಬುಡಕಟ್ಟು ಮಹಿಳೆಗೆ ಹುಟ್ಟಿದ ಮಗು ಎಂದು ಗೊತ್ತಾಯಿತು. ಒಂದೇ ಸಮಯಕ್ಕೆ ಒಂದೇ ವಾರ್ಡ್ ನಲ್ಲಿ ತಮ್ಮ ಪತ್ನಿ ಮತ್ತು ಇನ್ನೊಂದು ಬುಡಕಟ್ಟು ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಾನು ಬುಡಕಟ್ಟು ಕುಟುಂಬವನ್ನು ಸಂಪರ್ಕಿಸಿದೆ. ಅವರು ಕೂಡ ಗೊಂದಲದಲ್ಲಿದ್ದರು. ಕೊನೆಗೆ ಇಬ್ಬರೂ ಡಿಎನ್ಎ ಪರೀಕ್ಷೆ ಮಾಡಿಸಲು ಒಪ್ಪಿಕೊಂಡಿವೆ. ಪರೀಕ್ಷೆಯಲ್ಲಿ ದೃಢವಾಯಿತು ಎಂದರು ಅಹ್ಮದ್.