69ನೇ ಗಣರಾಜ್ಯೋತ್ಸವದಲ್ಲಿ ಇಂಡೋ-ಅಸಿಯಾನ್ ಸಂಬಂಧ ಅನಾವರಣ

ಇಡೀ ವಿಶ್ವದ ಗಮನ ಸೆಳೆದಿರುವ ಭಾರತದ 69ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಭಾರತ-ಅಸಿಯಾನ್ ರಾಷ್ಟ್ರಗಳ ಸ್ನೇಹ ಸಂಬಂಧ ಅನಾವರಣವಾಗಿದೆ.
ಅಸಿಯಾನ್ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಗಣರಾಜ್ಯೋತ್ಸವ ಪರೇಡ್ ವೀಕ್ಷಿಸುತ್ತಿರುವ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ
ಅಸಿಯಾನ್ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಗಣರಾಜ್ಯೋತ್ಸವ ಪರೇಡ್ ವೀಕ್ಷಿಸುತ್ತಿರುವ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ
Updated on
ನವದೆಹಲಿ: ಇಡೀ ವಿಶ್ವದ ಗಮನ ಸೆಳೆದಿರುವ ಭಾರತದ 69ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಭಾರತ-ಅಸಿಯಾನ್ ರಾಷ್ಟ್ರಗಳ ಸ್ನೇಹ ಸಂಬಂಧ ಅನಾವರಣವಾಗಿದೆ.
ದೆಹಲಿಯ ರಾಜ್ ಪಥ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿದಳಾಗಿ ಆಗಮಿಸಿರುವ ಅಸಿಯಾನ್ ರಾಷ್ಟ್ರಗಳ ನಾಯಕರನ್ನು ಪ್ರಧಾನಿ ಆತ್ಮೀಯವಾಗಿ ಬರ ಮಾಡಿಕೊಂಡರು. ಬಳಿಕ ನಡೆದ ಪಥ ಸಂಚಲನದಲ್ಲಿ ಆಸಿಯಾನ್ ರಾಷ್ಟ್ರಗಳ ಧ್ವಜಗಳನ್ನು ಹಿಡಿದ ಯೋಧರು ರಾಜ್ ಪಥ್ ನಲ್ಲಿ ಸಾಗಿದ್ದು ವಿಶೇಷವಾಗಿತ್ತು. 
ಭಾರತೀಯ ಸೇನೆಯ ಶಕ್ತಿಯ ಅನಾವರಣ
ಪ್ರಮುಖವಾಗಿ ಪಥ ಸಂಚಲನದಲ್ಲಿ ಭಾರತೀಯ ಸೇನೆಯ ಶಕ್ತಿ ಪ್ರದರ್ಶನ ಮಾಡಲಾಯಿತು. ಈ ವೇಳೆ ಭಾರತದ ಅತ್ಯಂತ ಯಶಸ್ವೀ  ಕ್ಷಿಪಣಿ ಮತ್ತು ಭಾರತ ರಷ್ಯಾ ದೇಶಗಳ ನಡುವಿನ ಸ್ನೇಹ ಪ್ರತೀಕವಾಗಿರುವ ಬ್ರಹ್ಮೋಸ್  ಕ್ಷಿಪಣಿಯ 881 ಕ್ಷಿಪಣಿ ರೆಜಿಮೆಂಟ್ ಪಥ ಸಂಚಲನದಲ್ಲಿ ಸಾಗಿತು. ವಿಶ್ವದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಏಕೈಕ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್ ಎಂಬ ಖ್ಯಾತಿ ಬ್ರಹ್ನೋಸ್ ಗಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆಯ ಅತ್ಯಂತ  ಶಕ್ತಿಶಾಲಿ ಮತ್ತು ಸ್ವದೇಶಿ ನಿರ್ಮಿತ ರಾಡಾರ್ ವ್ಯವಸ್ಥೆ ಸ್ವಾತಿ ತನ್ನ ಪ್ರದರ್ಶನ ತೋರಿತು. ಏಕಕಾಲದಲ್ಲೇ ಒಟ್ಟು ಏಳು ಟಾರ್ಗೆಟ್ ಗಳನ್ನು ಗುರುತಿಸಿ ದಾಳಇ ಮಾಡಬಲ್ಲ ಸಾಮರ್ಥ್ಯ ಸ್ವಾತಿ ರಾಡಾರ್ ವ್ಯವಸ್ಥೆಗಿದೆ. ಅಂತೆಯೇ 27ನೇ  ವಾಯು ಸೇನಾ ರೆಜಿಮೆಟ್ ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿಯನ್ನು ಪ್ರದರ್ಶನ ಮಾಡಲಾಯಿತು. 
ಭಾರತದ ಎಂ-17 ವಿ5 ಹೆಲಿಕಾಪ್ಟರ್​ ಆಗಸದಲ್ಲಿ  ಅಸಿಯಾನ್ ನಾಯಕರಿಗೆ ಧ್ವಜವಂದನೆ ಸಲ್ಲಿಕೆ ಮಾಡಿತು. ವಿಕ್ರಾಂತ್ ಮತ್ತು ಹೆಲಿಕ್ಯಾಪ್ಟರ್ ಕ್ಯಾರಿಯರ್ ರುದ್ರಾ, ಏರ್​ ಬಾರ್ನ್​ ವಾರ್ನಿಂಗ್ ಕಂಟ್ರೋಲರ್​​ ‘ನೇತ್ರ’ ವಿಮಾನ ತನ್ನ  ಪ್ರದರ್ಶನದ ಮೂಲಕ ಗಣ್ಯರ ಗಮನ ಸೆಳೆಯಿತು. ಇದಲ್ಲದೇ ಸೇನೆಯ 38 ವಿವಿಧ ಯುದ್ಧ ಹೆಲಿಕಾಫ್ಟರ್​ಗಳು ವೈಮಾನಿಕ ಪ್ರದರ್ಶನ ನೀಡಿದವು.
ಇದೇ ವೇಳೆ ಭಾರತೀಯ ಸೇನೆಯ ಬಿಎಸ್ಎಫ್ ನ ಮಹಿಳಾ ಕಮಾಂಡೋಗಳ ಮೋಟಾರ್ ಬೈಕ್ ಸಾಹಸ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. ಒಂದೇ ಬೈಕಿನಲ್ಲಿ ಹಲವು ಮಹಿಳಾ ಯೋಧರು ವಿವಿಧ ಭಂಗಿಯಲ್ಲಿ ಕುಳಿತು  ಸಾಹಸ ಮೆರೆದರು. ಸೀಮಾ ಭವಾನಿ ತಂಡದ 113 ಮಹಿಳಾ ಯೋಧರು ಈ ಬೈಕ್ ಸಾಹಸ ಪ್ರದರ್ಶನ ಮಾಡಿದರು. ಬಿಎಸ್​ಎಫ್ ಯೋಧರಿಂದ ಒಂಟೆ ಮತ್ತು 51 ಕುದುರೆಗಳ ಪಥಸಂಚಲನ ನೋಡುಗರ ಗಮನ ಸೆಳೆಯಿತು.
ಬಳಿಕ ನಡೆದ ಟ್ಯಾಬ್ಲೋಗಳ ಪ್ರದರ್ಶನದಲ್ಲಿ ಅಸ್ಸಾಂ ಸಾಂಸ್ಕೃತಿಕ ಸಂಪ್ರದಾಯ ಬಿಂಬಿಸುವ ಟ್ಯಾಬ್ಲೋ, ಛತ್ರಪತಿ ಶಿವಾಜಿ ಕುರಿತ ಮಹಾರಾಷ್ಟ್ರ ಸರ್ಕಾರದ ಟ್ಯಾಬ್ಲೋ, ಕರ್ನಾಟಕದ ಅರಣ್ಯ ಸಂಪತ್ತನ್ನು ಬಿಂಬಿಸುವ ಟ್ಯಾಬ್ಲೋಗಳು  ಪಂಥಸಂಚಲನದಲ್ಲಿ ಸಾಗಿದವು. ಪ್ರಮುಖವಾಗಿ ಮನ್​ಕೀ ಬಾತ್​, ಕರ್ನಾಟಕದ ವನ್ಯಜೀವಿ, ಐಟಿಬಿಪಿ ಸೇರಿ 23 ಟ್ಯಾಬ್ಲೋ  ಪ್ರದರ್ಶನ, ನೋಟು ನಿಷೇಧದ ಬಳಿಕ ಕಪ್ಪು ಹಣದ ವಿರುದ್ಧ ಸಮರದ ಕುರಿತು ಮಾಹಿತಿ ನೀಡುವ  ಟ್ಯಾಬ್ಲೋಗಳು ಕೂಡ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com