ಪದ್ಮಾವತ್ ವಿವಾದ: ಬನ್ಸಾಲಿ ತಾಯಿ ಕುರಿತು ಚಿತ್ರ ನಿರ್ಮಿಸುತ್ತೇವೆಂದ ಕರ್ಣಿ ಸೇನಾ

ಪದ್ಮಾವತ್ ಚಿತ್ರ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಸಾಕಷ್ಟು ವಿರೋಧದ ನಡುವೆಯೂ ಪದ್ಮಾವತ್ ಚಿತ್ರ ಬಿಡುಗಡೆಗೊಂಡ ಹಿನ್ನಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಕರ್ಣಿ ಸೇನಾ...
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ
ಜೈಪುರ: ಪದ್ಮಾವತ್ ಚಿತ್ರ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಸಾಕಷ್ಟು ವಿರೋಧದ ನಡುವೆಯೂ ಪದ್ಮಾವತ್ ಚಿತ್ರ ಬಿಡುಗಡೆಗೊಂಡ ಹಿನ್ನಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಕರ್ಣಿ ಸೇನಾ ಇದೀಗ ಪದ್ಮಾವತ್ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ತಾಯಿ ಕುರಿತ ಚಿತ್ರ ನಿರ್ಮಿಸುತ್ತೇವೆಂದು ಗುರುವಾರ ಹೇಳಿದೆ.
ಚಿತ್ತೋರ್ಗರ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕರ್ಣಿ ಸೇನಾದ ಜಿಲ್ಲಾಧ್ಯಕ್ಷ ಗೋವಿಂದ್ ಸಿಂಗ್ ಖಾಂಗರೋಟ್ ಅವರು, ಸಂಜಯ್ ಲೀಲಾ ಬನ್ಸಾಲಿಯವರ ತಾಯಿ ಕುರಿತು ನಾವು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರದ ಹೆಸರು ಲೀಲಾ ಕೀ ಲೀಲಾ. ಚಿತ್ರವನ್ನು ಅರವಿಂದ್ ವ್ಯಾಸ್ ಅವರು ನಿರ್ದೇಶಿಸುತ್ತಿದ್ದು, ಈಗಾಗಲೇ ಚಿತ್ರ ಕಥೆ ಬರೆಯುವ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿದೆ ಎಂದು ಹೇಳಿದ್ದಾರೆ. 
15 ದಿಂಗಳಲ್ಲಿ ಚಿತ್ರದ ಮುಹೂರ್ತವನ್ನು ನೆರವೇರಿಸಲಾಗುತ್ತದೆ. ವರ್ಷದೊಳಗಾಗಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ. ಚಿತ್ರವನ್ನು ರಾಜಸ್ತಾನದಾದ್ಯಂತ ಪ್ರದರ್ಶಿಸಲಾಗುತ್ತದೆ ಬನ್ಸಾಲಿಯವರು ಪದ್ಮಾವತಿ ಚಿತ್ರದ ಮೂಲಕ ನಮ್ಮ ತಾಯಿಯನ್ನು ಅವಮಾನಿಸಿದ್ದಾರೆ. ಆದರೆ, ನಮ್ಮ ಚಿತ್ರದಲ್ಲಿ ಆ ರೀತಿ ನಾವು ಮಾಡುವುದಿಲ್ಲ. ಚಿತ್ರವನ್ನು ನೋಡಿದ ಬಳಿಕ ಬನ್ಸಾಲಿ ಹೆಮ್ಮೆ ಪಡುತ್ತಾರೆ.
ಪ್ರತೀಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮ್ಮ ದೇಶ ನೀಡಿದೆ. ಈ ಹಕ್ಕನ್ನು ನಾವು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುತ್ತೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com