ಮೊನ್ನೆ ಶುಕ್ರವಾರ (ಜ.26) ಸುಮಾರು 80 ಮಂದಿ ಭಾಗವಹಿಸಿದ್ದ ಪ್ರಾರ್ಥನಾ ಸಭೆಯ ನೇತೃತ್ವವನ್ನು ವಹಿಸಿಕೊಂಡಿದ್ದ ಜಮಿತಾ "ಕುರಾನ್‌ನಲ್ಲಿ ಮಹಿಳೆಯರ ಬಗ್ಗೆ ತಾರತಮ್ಯ ಭಾವನೆ ಇಲ್ಲ. ಇಮಾಮ್ ಆಗಿ ಇದು ನನ್ನ ಕರ್ತವ್ಯ. ಇದೇ ಮೊದಲ ಬಾರಿಗೆ ನಾನು ಪ್ರಾರ್ಥನಾ ಸಭೆ ನೇತೃತ್ವ ವಹಿಸುತ್ತಿದ್ದೇನೆ. ನನ್ನ ಕಛೇರಿಯಲ್ಲಿ ಪ್ರತಿ ಶುಕ್ರವಾರ ಈ ರೀತಿ ಪ್ರಾರ್ಥನೆ ಕಾರ್ಯಕ್ರಮ ನಡೆ೩ಸುತ್ತೇನೆ" ಎಂದರು. ಕುರಾನ್ ಸುನ್ನತ್ ಸೊಸೈಟಿಯ ಕಾರ್ಯಾಲಯದಲ್ಲಿ ಈ ಪ್ರಾರ್ಥನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.