ಕೋರ್ಟ್ ಗೆ ತಪ್ಪು ಮಾಹಿತಿ: ಸ್ವಾಮಿ ನಿತ್ಯಾನಂದಗೆ ಬಂಧನ ಭೀತಿ

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಬಂಧನದ ಭೀತಿ ಎದುರಾಗಿದ್ದು ನಿತ್ಯಾನಂದನ ವಿರುದ್ಧ ಬಂಧನ ವಾರೆಂಟ್ ಹೊರಡಿಸುವುದಾಗಿ ಮದ್ರಾಸ್ ಹೈಕೋರ್ಟ್ ಎಚ್ಚರಿಕೆ ನೀಡಿದೆ...
ನಿತ್ಯಾನಂದ
ನಿತ್ಯಾನಂದ
ಚೆನ್ನೈ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಬಂಧನದ ಭೀತಿ ಎದುರಾಗಿದ್ದು ನಿತ್ಯಾನಂದನ ವಿರುದ್ಧ ಬಂಧನ ವಾರೆಂಟ್ ಹೊರಡಿಸುವುದಾಗಿ ಮದ್ರಾಸ್ ಹೈಕೋರ್ಟ್ ಎಚ್ಚರಿಕೆ ನೀಡಿದೆ. 
ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ನ್ಯಾಯಸ್ಥಾನವನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ಆರ್.ಮಹದೇವನ್ ಅವರು ನಿತ್ಯಾನಂದನನ್ನು ಬಂಧಿಸಿ ಬುಧವಾರದೊಳಗೆ ಕೋರ್ಟ್ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. 
ಕೋರ್ಟ್ ದಾರಿ ತಪ್ಪಿಸುವ, ಸುಳ್ಳು ಹೇಳಿಕೆ ನೀಡದ ಆರೋಪ ಕೇಳಿ ಬಂದಿದ್ದು ಮತ್ತೆ ಮತ್ತೇ ಸರಿಪಡಿಸಿಕೊಳ್ಳುಲು ಹೇಳಿದ್ದರೂ ಸರಿಪಡಿಸಿಕೊಳ್ಳದ ಹಿನ್ನೆಲೆಯಲ್ಲಿ ಕೋರ್ಟ್ ನೋಟಿಸ್ ನೀಡಿದ್ದು ಅಧ್ಯಾತ್ಮ ಗುರುಗಳು ಕಾನೂನಿಗಿಂತ ದೊಡ್ಡವರೆನ್ನಲ್ಲ ಎಂದು ನ್ಯಾಯಮೂರ್ತಿ ಆರ್ ಮಹದೇವನ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನಿತ್ಯಾನಂದನ ಶಿಷ್ಯನೊರ್ವ ನಿಬಂಧನೆಗಳಿಗೆ ವಿರುದ್ಧವಾಗಿ ಕೋರ್ಟ್ ಹಾಲ್ ಒಳಗೆ ಮೊಬೈಲ್ ಫೋನ್ ಅನ್ನು ತಂದಿದ್ದು ಅಲ್ಲದೆ ಎಸ್ಎಂಎಸ್ ಮಾಡುತ್ತಿದ್ದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿ ಸದರಿ ವ್ಯಕ್ತಿಯಿಂದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳುವಂತೆ ಪೊಲೀಸರಿಗೆ ಆದೇಶಿಸಿದರು. 
ಮಧುರೈ ಪೀಠ ವ್ಯವಹಾರಗಳಲ್ಲಿ ಸ್ವಾಮಿ ನಿತ್ಯಾನಂದ ಹಸ್ತಕ್ಷೇಪ ಮಾಡದಂತೆ ಆದೇಶ ನೀಡಬೇಕು ಎಂದು ಕೋರಿ ವ್ಯಕ್ತಿಯೋರ್ವ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಸಂಬಂಧ ನಿತ್ಯಾನಂದ ತಪ್ಪು ಮಾಹಿತಿಯನ್ನು ಅಫಿಡವಿಟ್ ನಲ್ಲಿ ತಿಳಿಸಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳು ಸರಿಯಾದ ಮಾಹಿತಿಯನ್ನು ಸೂಕ್ತ ವಿವರಗಳೊಂದಿಗೆ ಅಫಿಡವಿಟ್ ಸಲ್ಲಿಸುವಂತೆ ನಿತ್ಯಾನಂದನ ಪರ ವಕೀಲರಿಗೆ ಆದೇಶಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com